ಕೆಎಲ್ ರಾಹುಲ್ ಕೈಬಿಟ್ಟಿರುವುದಕ್ಕೆ ಕಪಿಲ್ ದೇವ್ ಗೆ ಆಘಾತ

ಕೆಎಲ್ ರಾಹುಲ್ ಕೈಬಿಟ್ಟಿರುವುದಕ್ಕೆ ಕಪಿಲ್ ದೇವ್ ಗೆ ಆಘಾತ

HSA   ¦    Feb 25, 2020 05:05:42 PM (IST)
ಕೆಎಲ್ ರಾಹುಲ್ ಕೈಬಿಟ್ಟಿರುವುದಕ್ಕೆ ಕಪಿಲ್ ದೇವ್ ಗೆ ಆಘಾತ

ಮುಂಬಯಿ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ನ್ನು ಟೀಂ ಇಂಡಿಯಾ ಹೀನಾಯವಾಗಿ ಸೋಲುಂಡ ಬಳಿಕ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ತಂಡದ ಆಡಳಿತದ ವಿರುದ್ಧ ಕಿಡಿಯಾಗಿದ್ದಾರೆ.

ತಂಡದ ಆಯ್ಕೆಯೇ ನನಗೆ ಅರ್ಥವಾಗುತ್ತಿಲ್ಲ. ಟೆಸ್ಟ್ ತಂಡದಿಂದ ಕೆ.ಎಲ್.ರಾಹುಲ್ ಅವರನ್ನು ಕೈಬಿಟ್ಟಿರುವುದು ದೊಡ್ಡ ಆಘಾತ. ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಅವರನ್ನು ಹೊರಗಿಡಲು ಕಾರಣವೇನು ಎಂದು ಕಪಿಲ್ ಪ್ರಶ್ನಿಸಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ಉತ್ತಮವಾಗಿ ಆಡಿದೆ. ಅವರಿಗೆ ಅಭಿನಂದನೆಗಳು. ಆದರೆ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತಕ್ಕೆ 200 ರನ್ ಪೇರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.