ಕಾಂಗ್ರೆಸ್ ಪರ ಪ್ರಚಾರ ಆರೋಪ: ಕುಸ್ತಿಪಟು ಯಾಧವ್ ವಿರುದ್ಧ ದೂರು

ಕಾಂಗ್ರೆಸ್ ಪರ ಪ್ರಚಾರ ಆರೋಪ: ಕುಸ್ತಿಪಟು ಯಾಧವ್ ವಿರುದ್ಧ ದೂರು

YK   ¦    Apr 23, 2019 04:20:22 PM (IST)
ಕಾಂಗ್ರೆಸ್ ಪರ ಪ್ರಚಾರ ಆರೋಪ: ಕುಸ್ತಿಪಟು ಯಾಧವ್ ವಿರುದ್ಧ ದೂರು

ಮುಂಬೈ: ಕಾಂಗ್ರೆಸ್ ಪಕ್ಷದ ಪರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಆರೋಪದ ಮೇರೆಗೆ ಕುಸ್ತಿಪಟು ಹಾಗೂ ಪೊಲೀಸ್ ಆಯುಕ್ತ ನರಸಿಂಗ್ ಯಾಧವ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಶಿವಸೇನೆ ಕಾರ್ಯಕರ್ತರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಅಂಬೋಲಿ ಪೊಲೀಸರು ಎಫ್ ಐಆರ್ ನ್ನು ದಾಖಲಿಸಿಕೊಂಡಿದ್ದಾರೆ.

ಭಾನುವಾರ ಯಾದವ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ನಿರುಪಮ್ ಪರ ಪ್ರಚಾರದ ಚುನಾವಣಾ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.