ಆಸ್ಟ್ರೇಲಿಯಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಜಯ

ಆಸ್ಟ್ರೇಲಿಯಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಜಯ

HSA   ¦    May 10, 2019 04:06:10 PM (IST)
ಆಸ್ಟ್ರೇಲಿಯಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಜಯ

ಪರ್ತ್: ವಿಶ್ವ ಲೀಗ್ ಫೈನಲ್ಸ್ ಟೂರ್ನಿಗೆ ಅಭ್ಯಾಸ ನಡೆಸುತ್ತಿರುವ ಭಾರತ ತಂಡವು ಆಸ್ಟ್ರೇಲಿಯಾ `ಎ' ವಿರುದ್ಧ 3-0 ಭರ್ಜರಿ ಗೆಲುವು ದಾಖಲಿಸಿದೆ.

ಸುಮಿತ್ ಕುಮಾರ್ ಜೂನಿಯರ್ ಎರಡು ಮತ್ತು ರೂಪಿಂದರ್ ಪಲ್ ಸಿಂಗ್ ಒಂದು ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತವು ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿ ಪ್ರಾಬಲ್ಯ ಸಾಧಿಸಿತು. ಮೊದಲ ಕ್ವಾರ್ಟರ್ ನಲ್ಲೇ ಮೂರು ಗೋಲು ಬಾರಿಸಿ ಆತಿಥೇಯರ ಮೇಲೆ ಸಂಪೂರ್ಣ ಒತ್ತಡ ಹೇರಿತು.