ಧೋನಿಗೆ ಸವಾಲು ಹಾಕಿದ್ದ ಕೋಚ್ ಚಾಪೆಲ್

ಧೋನಿಗೆ ಸವಾಲು ಹಾಕಿದ್ದ ಕೋಚ್ ಚಾಪೆಲ್

HSA   ¦    May 14, 2020 07:13:28 PM (IST)
ಧೋನಿಗೆ ಸವಾಲು ಹಾಕಿದ್ದ ಕೋಚ್ ಚಾಪೆಲ್

ನವದೆಹಲಿ: ಟೀಂ ಇಂಡಿಯಾದ ವಿವಾದಿತ ಕೋಚ್ ಗ್ರೆಗ್ ಚಾಪೆಲ್ ನೀಡಿದ ಸವಾಲಿನಿಂದಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಕ್ರಿಕೆಟಿನ ಅತ್ಯುತ್ತಮ ಫಿನಿಶರ್ ಆಗಿರುವರಂತೆ!

ಹೌದು, ಇದನ್ನು ಸ್ವತಃ ಗ್ರೆಗ್ ಚಾಪೆಲ್ ಅವರು ತನ್ನ ಸಂದರ್ಶನದಲ್ಲಿ ತಿಳಿಸಿರುವರು.

ಧೋನಿ ಆರಂಭಿಕ ದಿನದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 183 ರನ್ ಬಾರಿಸಿದ್ದರು. ಇದರಲ್ಲಿ ಬೌಂಡರಿ ಹಾಗೂ ಸಿಕ್ಸರ್ ಗಳ ಸುರಿಮಳೆಯಿತ್ತು. ಆದರೆ ಅವರು ಹೀಗೆ ಆಡಿದರೆ ಮುಂದೆ ತನ್ನ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದೆ ಹೀಗಾಗಿ ನಾನೊಂದು ಸವಾಲು ಹಾಕಿದೆ ಎಂದು ಚಾಪೆಲ್ ವಿವರಿಸಿದ್ದಾರೆ.

ಮರು ಪಂದ್ಯವು ಪುಣೆಯಲ್ಲಿ ನಡೆಯಬೇಕಾಗಿತ್ತು. ಈ ಪಂದ್ಯದಲ್ಲಿ ರನ್ ಚೇಸ್ ಮಾಡಿದ ನಮಗೆ 80ರಿಂದ 100 ರನ್ ಬೇಕಿತ್ತು. ಈ ವೇಳೆ ಧೋನಿ ಕ್ರೀಸಿಗಿಳಿಯುವ ಮೊದಲು ನಾನು ಅವರಲ್ಲಿ ಈ ಪಂದ್ಯವನ್ನು ಗೆಲ್ಲಲೇಬೇಕು ಎಂದಿದ್ದೆ. ಆದರೆ ಗೆಲ್ಲುವ ತನಕ ಗಾಳಿಯಲ್ಲಿ ಚೆಂಡನ್ನು ಬಾರಿಸಬಾರದು ಎಂದಿದ್ದರೆ. ಹಾಗೆ ಮಾಡಿ ಗೆಲುವು ತಂದುಕೊಟ್ಟಿದ್ದರು ಎಂದು ತನ್ನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಧೋನಿ ಒಳ್ಳೆಯ ಫಿನಿಶರ್. ಆದರೆ ಕೆಲವೊಂದು ಸಲ ರಿಸ್ಕ್ ತೆಗೆದುಕೊಳ್ಳುವರು. ಇದು ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಚಾಪಲ್ ಹೇಳಿದ್ದಾರೆ.