ಶೀಘ್ರದಲ್ಲೇ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ

ಶೀಘ್ರದಲ್ಲೇ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ

Apr 01, 2021 01:59:27 PM (IST)
 ಶೀಘ್ರದಲ್ಲೇ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ಮದುವೆ ಶೀಘ್ರವೇ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಸಂಗತಿಯನ್ನು ವಿಶಾಲ್ ಅವರೇ ಬಹಿರಂಗಪಡಿಸಿದ್ದಾರೆ. ಮುಂಬರಲಿರುವ 'ಅರಣ್ಯ' ತಮಿಳು ಚಿತ್ರದಲ್ಲಿ ವಿಶಾಲ್ ನಟಿಸಿದ್ದಾರೆ.
ಜ್ವಾಲಾ ಗುಟ್ಟಾ ಮತ್ತು ವಿಷ್ಣು ವಿಶಾಲ್ ಹಲವಾರು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು. ಈಗ ಜೋಡಿ ಮದುವೆಯಾಗಲು ನಿರ್ಧರಿಸಿರುವುದಾಗಿ ವಿಶಾಲ್ ಖಾತರಿಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಗುಟ್ಟಾ ಮತ್ತು ವಿಶಾಲ್ ಮಧ್ಯೆ ಎಂಗೇಜ್ಮೆಂಟ್ ನಡೆದಿತ್ತು. ಬಹುಭಾಷಾ ಚಿತ್ರ ಅರಣ್ಯದ ರಿಲೀಸ್‌ಗೂ ಮುನ್ನ ಹೈದರಾಬಾದ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿಷ್ಣು, 'ನಾವಿಬ್ಬರೂ ಒಂಟಿಯಿಂದ ಜಂಟಿ ಜೀವನಕ್ಕೆ ಕಾಲಿರಿಸಲಿದ್ದೇವೆ. ನಾನು ಶೀಘ್ರ ತೆಲುಗು ಅಲ್ಲುಡು (ಅಳಿಯ) ಆಗಲಿದ್ದೇನೆ. ಶೀಘ್ರ ಮದುವೆಯ ದಿನಾಂಕ ತಿಳಿಸಲಿದ್ದೇನೆ' ಎಂದಿದ್ದಾರೆ.
ವಿಷ್ಣು ಈ ಹಿಂದೆ ರಜಿನಿ ನಟರಾಜನ್ ಎಂಬವರನ್ನು ಮದುವೆಯಾಗಿದ್ದರು. ರಜಿನಿ-ವಿಷ್ಣು ಜೋಡಿಗೆ ಆರ್ಯನ್ ಎನ್ನುವ ಪುತ್ರನಿದ್ದಾನೆ. ಆದರೆ 2010ರಲ್ಲಿ ಮದುವೆಯಾಗಿದ್ದ ರಜಿನಿ-ವಿಷ್ಣು 2018ರಲ್ಲಿ ಡೈವೋರ್ಸ್‌ ಪಡೆದುಕೊಂಡಿದ್ದರು. . ಇತ್ತ ಗುಟ್ಟಾ ಕೂಡ ಶೆಟ್ಲರ್ ಚೇತನ್ ಆನಂದ್ ಅವರನ್ನು 2005ರಲ್ಲಿ ವರಿಸಿದ್ದರು. ಇವರ ದಾಂಪತ್ಯ ಬದುಕು ಕೂಡ 2011ರಲ್ಲಿ ಕೊನೆಗೊಂಡಿತ್ತು.