ವಿಮಾನ ಯಾನ ಆರಂಭವಾದರೆ ಇದೇ ವರ್ಷ ಐಪಿಎಲ್: ಗಂಗೂಲಿ

ವಿಮಾನ ಯಾನ ಆರಂಭವಾದರೆ ಇದೇ ವರ್ಷ ಐಪಿಎಲ್: ಗಂಗೂಲಿ

HSA   ¦    Jul 09, 2020 03:08:42 PM (IST)
ವಿಮಾನ ಯಾನ ಆರಂಭವಾದರೆ ಇದೇ ವರ್ಷ ಐಪಿಎಲ್: ಗಂಗೂಲಿ

ನವದೆಹಲಿ: ವಿದೇಶಿ ವಿಮಾನ ಯಾನವು ಸುರಕ್ಷಿತವಾಗಿ ಆರಂಭವಾದರೆ ಆಗ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಇದೇ ವರ್ಷ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಯ) ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.

ಕೊರೋನಾ ಸೋಂಕಿನಿಂದಾಗಿ ವಿದೇಶಿ ವಿಮಾನ ಯಾನವು ಇದುವರೆಗೆ ಆರಂಭವಾಗಿಲ್ಲ ಮತ್ತು ಭಾರೀ ಸಂಖ್ಯೆಯಲ್ಲಿ ಜನ ಸೇರಲು ನಿರ್ಬಂಧವಿರುವ ಕಾರಣದಿಂದಾಗಿ ಐಪಿಎಲ್ ನ್ನು ಮುಂದೂಡಲಾಗಿದೆ.

ಮಾರ್ಚ್ ಅಂತ್ಯಕ್ಕೆ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಲಾಕ್ ಡೌನ್ ಆದ ಕಾರಣ ಐಪಿಎಲ್ ಮುಂದೂಡಲ್ಪಟ್ಟಿದೆ.

ರಣಜಿ ಸಹಿತ ದೇಶಿ ಟೂರ್ನಮೆಂಟ್ ಗಳನ್ನು ಕೂಡ ದೇಶಿಯ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರಯಾಣ ವ್ಯವಸ್ಥೆಯು ಸುರಕ್ಷಿತವಾಗಿ ಆರಂಭವಾದ ಬಳಿಕವಷ್ಟೇ ಆರಂಭಿಸಲಾಗುವುದು ಎಂದರು.