ಬ್ರಿಸ್ಬೇನ್: ಟೀಂ ಇಂಡಿಯಾದ ಪ್ರದರ್ಶನವು ಐತಿಹಾಸಿಕ ಎಂದು ಕೋಚ್ ರವಿ ಶಾಸ್ತ್ರಿ ಅವರು ಹೇಳಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ಕೇವಲ 36 ರನ್ ಗೆ ಆಲೌಟ್ ಆದ ಬಳಿಕ ತೋರಿಸಿದಂತಹ ಧೈರ್ಯ, ಸಂಕಲ್ಪ, ಚೈತನ್ಯ ವಾಸ್ತವಕ್ಕೆ ದೂರವಾಗಿದೆ. ಒಂದು ಸಲವೂ ತಂಡದ ಮನೋಬಲ ಕುಸಿದಿಲ್ಲ ಎಂದು ಅವರು ತಿಳಿಸಿದರು.
ಈ ಗೆಲುವು ಭಾರತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಜಗತ್ತೇ ನಿಂತು ನಿಮ್ಮನ್ನು ನಮಸ್ಕರಿಸಲಿದೆ ಎಂದರು.
ಈ ಕ್ಷಣವನ್ನು ನೀವು ಸಾಧ್ಯವಾದಷ್ಟು ಆನಂದಿಸಿ. ಇದೇ ವೇಳೆ ಚೇತೇಶ್ವರ ಪೂಜಾರ ಅವನ್ನು ಅಲ್ಟಿಮೇಟ್ ವಾರಿಯರ್ ಎಂದು ಕೊಂಡಾಡಿರುವ ಅವರು, ರಿಷಬ್ ಪಂತ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶುಭ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಟಿ. ನಟರಾಜನ್ ಅವರ ಪ್ರದರ್ಶನವನ್ನು ಕೂಡ ಪ್ರಶಂಸಿಸಿದರು.