ಕ್ರಿಕೆಟ್ ಆಟಕ್ಕೂ ಕೊರೋನಾ ಸೋಂಕಿನ ಭೀತಿ

ಕ್ರಿಕೆಟ್ ಆಟಕ್ಕೂ ಕೊರೋನಾ ಸೋಂಕಿನ ಭೀತಿ

HSA   ¦    Mar 17, 2020 03:09:38 PM (IST)
ಕ್ರಿಕೆಟ್ ಆಟಕ್ಕೂ ಕೊರೋನಾ ಸೋಂಕಿನ ಭೀತಿ

ಜೋಹನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಭೀತಿಯಿಂದಾಗಿ ಮುಂದಿನ 60 ದಿನಗಳ ಕಾಲ ಕ್ರಿಕೆಟ್ ಚಟುವಟಿಕೆಗಳನ್ನು ಸ್ತಬ್ದಗೊಳಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್ ಎ) ಪ್ರಕಟಣೆ ತಿಳಿಸಿದೆ.

ದೇಶೀಯ ಟೂರ್ನಮೆಂಟ್ ನ ಎರಡು ಟೂರ್ನಮೆಂಟ್ ಗಳು ಅರ್ಧಕ್ಕೆ ನಿಲ್ಲಲಿದೆ ಎಂದು ಸಿಎಸ್ ಎ ಮುಖ್ಯಸ್ಥ ಸಿರಿಲ್ ರಾಮಪೋಸ ಸೋಮವಾರ ಸಭೆಯ ಬಳಿಕ ತಿಳಿಸಿದರು.

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಬೋರ್ಡ್ ತಿಳಿಸಿದೆ.