ಸಚಿನ್ 2003ರ ವಿಶ್ವಕಪ್ ನಲ್ಲಿ 98ರನ್ ಗೆ ಔಟಾಗಿರುವುದು ಬೇಸರ ಮೂಡಿಸಿತ್ತು: ಅಖ್ತರ್

ಸಚಿನ್ 2003ರ ವಿಶ್ವಕಪ್ ನಲ್ಲಿ 98ರನ್ ಗೆ ಔಟಾಗಿರುವುದು ಬೇಸರ ಮೂಡಿಸಿತ್ತು: ಅಖ್ತರ್

HSA   ¦    May 20, 2020 01:44:30 PM (IST)
ಸಚಿನ್ 2003ರ ವಿಶ್ವಕಪ್ ನಲ್ಲಿ 98ರನ್ ಗೆ ಔಟಾಗಿರುವುದು ಬೇಸರ ಮೂಡಿಸಿತ್ತು: ಅಖ್ತರ್

ನವದೆಹಲಿ: 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ವೇಳೆ ಪಾಕಿಸ್ತಾನ ವಿರುದ್ಧ ಸಚಿನ್ ತೆಂಡೂಲ್ಕರ್ 98 ರನ್ ಗೆ ಔಟಾಗಿದ್ದು ತುಂಬಾ ಬೇಸರ ಮೂಡಿಸಿತ್ತು ಎಂದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.

ಅಖ್ತರ್ ಎಸೆತದಲ್ಲಿ ಸಚಿನ್ ಅದ್ಭುತವಾಗಿ ಡೀಪ್ ಸ್ಕ್ವೇರ್ ನಲ್ಲಿ ಸಿಕ್ಸರ್ ಬಾರಿಸಿದ್ದರು. ಆದರೆ 98 ರನ್ ಮಾಡಿದ್ದ ವೇಳೆ ಬೌನ್ಸರ್ ಎಸೆತಕ್ಕೆ ಸಚಿನ್ ಔಟಾಗಿದ್ದರು.

ಸಚಿನ್ 98 ರನ್ ಮಾಡಿ ಔಟಾಗಿರುವುದು ತುಂಬಾ ನೋವುಂಟು ಮಾಡಿತ್ತು. ಅದೊಂದು ವಿಶೇಷ ಇನ್ನಿಂಗ್ಸ್. ಅವರು ಶತಕದ ಅಂಚಿನಲ್ಲಿದ್ದರು. ಅವರು ಶತಕ ಬಾರಿಸಬೇಕೆಂದು ನಾನು ಬಯಸಿದ್ದೆ. ಬೌನ್ಸರ್ ನಲ್ಲಿ ಸಿಕ್ಸರ್ ಬಾರಿಸಬೇಕೆಂದು ನಾನು ಇಚ್ಛಿಸಿದ್ದೆ ಎಂದು ಅಖ್ತರ್ ಹೆಲೊ ಲೈವ್ ಸೆಷನ್ ನಲ್ಲಿ ತಿಳಿಸಿದರು.

ಸಚಿನ್ ಕ್ರಿಕೆಟ್ ಯುಗದ ತುಂಬಾ ಕಠಿಣ ಸಮಯದಲ್ಲಿ ಬ್ಯಾಟಿಂಗ್ ಮಾಡಿದರು. ಒಂದು ವೇಳೆ ಅವರು ಇಲ್ಲಿಯವರೆಗೆ ಆಡುತ್ತಲಿದ್ದರೆ1.30 ಲಕ್ಷ ರನ್ ಮಾಡುತ್ತಿದ್ದರು. ಸಚಿನ್ ಮತ್ತು ಕೊಹ್ಲಿ ಹೋಲಿಕೆ ಸರಿಯಲ್ಲ ಎಂದರು.