ಆರ್ ಸಿಬಿ ಪರ ಆಡಲು ಕಾತರಿಸಿದ್ದೇನೆ: ಆಡಂ ಜಂಪ

ಆರ್ ಸಿಬಿ ಪರ ಆಡಲು ಕಾತರಿಸಿದ್ದೇನೆ: ಆಡಂ ಜಂಪ

HSA   ¦    Sep 16, 2020 12:42:09 PM (IST)
ಆರ್ ಸಿಬಿ ಪರ ಆಡಲು ಕಾತರಿಸಿದ್ದೇನೆ: ಆಡಂ ಜಂಪ

ದುಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್(ಆರ್ ಸಿಬಿ) ಪರವಾಗಿ ಆಡಲು ಕಾತರಿಸಿದ್ದೇನೆ ಎಂದು ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪ ತಿಳಿಸಿದರು.

ಯುಎಇಯಲ್ಲಿ ನಡೆಯಲಿರುವ ಐಪಿಎಲ್ 2020ಯಲ್ಲಿ ಕೇನ್ ರಿಚರ್ಡಸನ್ ಬದಲಿಗೆ ಜಂಪ ಅವರನ್ನು ಆರ್ ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. 29ರ ಹರೆಯದ ರಿಚರ್ಡಸನ್ ಅವರು ಐಪಿಎಲ್ ನಿಂದ ದೂರ ಉಳಿದಿದ್ದಾರೆ.

ಯುಎಇಯಲ್ಲಿ ಇರುವಂತಹ ನಿಧಾನಗತಿಯ ಪಿಚ್ ಗೆ ಅನುಗುಣವಾಗಿ ಜಂಪ ಅವರನ್ನು ತಂಡವು ಆಯ್ಕೆ ಮಾಡಿದೆ.