ಪಾಕಿಸ್ತಾನ ಜತೆ ದ್ವಿಪಕ್ಷೀಯ ಸರಣಿ ಸಾಧ್ಯವಿಲ್ಲ: ಚೇತನ್ ಚೌವ್ಹಾಣ್

ಪಾಕಿಸ್ತಾನ ಜತೆ ದ್ವಿಪಕ್ಷೀಯ ಸರಣಿ ಸಾಧ್ಯವಿಲ್ಲ: ಚೇತನ್ ಚೌವ್ಹಾಣ್

HSA   ¦    Feb 13, 2020 03:21:34 PM (IST)
ಪಾಕಿಸ್ತಾನ ಜತೆ ದ್ವಿಪಕ್ಷೀಯ ಸರಣಿ ಸಾಧ್ಯವಿಲ್ಲ: ಚೇತನ್ ಚೌವ್ಹಾಣ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡಿದರೆ ಅದರಿಂದ ಕ್ರೀಡೆಗೆ ಒಳ್ಳೆಯದು ಎಂದು ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ನೀಡಿರುವ ಹೇಳಿಕೆಗೆ ಮಾಜಿ ಕ್ರಿಕೆಟಿಗ ಚೇತನ್ ಚೌವ್ಹಾಣ್ ತಿರುಗೇಟು ನೀಡಿರುವರು.

ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಇರುವ ತನಕ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ. ಪಾಕಿಸ್ತಾನ ಕ್ರಿಕೆಟ್ ಆಡಲು ಸುರಕ್ಷಿತ ತಾಣವಲ್ಲ, ಉಗ್ರರಿಗೆ ಕ್ರಿಕೆಟ್ ಬಗ್ಗೆ ಕಾಳಜಿಯಿಲ್ಲ. ಉಗ್ರರು ಇರುವ ತನಕ ಕ್ರಿಕೆಟ್ ಸಾಧ್ಯವಾಗದು ಎಂದು ಚೇತನ್ ಚೌವ್ಹಾಣ್ ತಿಳಿಸಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ನಲ್ಲಿ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಆಗಿರುವ ಬಗ್ಗೆ ಕೇಳಿದಾಗ, ತಂಡದಲ್ಲಿ ಅಜಿಂಕ್ಯ ರಹಾನೆಗೆ ಸ್ಥಾನ ನೀಡಬೇಕಿತ್ತು. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಹೊರಬಿದ್ದಾಗ ರಹಾನೆಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.