ಮರಾಠ ಮರಾಟಿ ಕ್ರೀಡಾಕೂಟ : “ಕಾನೂರು ಗೂಗ್ಲಿ” ತಂಡ ಚಾಂಪಿಯನ್

ಮರಾಠ ಮರಾಟಿ ಕ್ರೀಡಾಕೂಟ : “ಕಾನೂರು ಗೂಗ್ಲಿ” ತಂಡ ಚಾಂಪಿಯನ್

CI   ¦    May 16, 2019 04:00:59 PM (IST)
ಮರಾಠ ಮರಾಟಿ ಕ್ರೀಡಾಕೂಟ : “ಕಾನೂರು ಗೂಗ್ಲಿ” ತಂಡ ಚಾಂಪಿಯನ್

ಮಡಿಕೇರಿ: ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಬಾಂಧವರಿಗಾಗಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಿದ್ದ 6ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ “ಕಾನೂರು ಗೂಗ್ಲಿ” ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ, ಕೊಡಗು ಜಿಲ್ಲಾ ಅಂಭಾಭವಾನಿ ಯುವ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಡಿಕೇರಿ ತಾಲೂಕಿನ ಮೂರ್ನಾಡಿನಲ್ಲಿ ಸಮಾಜಬಾಂಧವರಿಗೆ 2 ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಫೈನಲ್ ಪಂದ್ಯಟದಲ್ಲಿ ರಾಯಲ್ ಫ್ರೆಂಡ್ಸ್ ಕರಿಕೆ ಮತ್ತು ಕಾನೂರು ಗೂಗ್ಲಿ ತಂಡ ಪ್ರಶಸ್ತಿಗಾಗಿ ಹಣಾಹಣಿ ನಡೆಸಿತು. ಟಾಸ್ ಸೋತ ಗೂಗ್ಲಿ ತಂಡ ನಿಗಧಿತ 6 ಓವರ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 60 ರನ್ ಕಲೆ ಹಾಕಿತು. ತಂಡದ ಪರ ಮೋಹನ್ 16, ಹರೀಶ್ 10, ಜೀವನ್ 11 ರನ್ ದಾಖಲಿಸಿದರು. ಗುರಿ ಬೆನ್ನತ್ತಿದ ರಾಯಲ್ ಫ್ರೆಂಡ್ಸ್ ಕರಿಕೆ ತಂಡ ನಿಗದಿತ ಓವರ್‍ನಲ್ಲಿ 59ರನ್ ಕಲೆ ಹಾಕಿ 1 ರನ್ ಅಂತರದಲ್ಲಿ ವೀರೋಚಿತ ಸೋಲು ಕಂಡಿತ್ತು. ಪರಿಣಾಮವಾಗಿ 2019ರ ಚಾಂಪಿಯನ್ ತಂಡವಾಗಿ ಕಾನೂರು ಗೂಗ್ಲಿ ತಂಡ ಹೊರನಡೆದರೆ, ಕರಿಕೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಕಾನೂರು ಗೂಗ್ಲಿ ತಂಡ, ರಾಯಲ್ ಫ್ರೆಂಡ್ಸ್ ಕರಿಕೆ ತಂಡವನ್ನು 12 ರನ್‍ಗಳಿಂದ ಮಣಿಸಿ ಫೈನಲ್‍ಗೆ ನೇರ ಪ್ರವೇಶ ಪಡೆಯಿತು. ಪರಭವಗೊಂಡ ಕರಿಕೆ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಅಂಚಿಗೈಯ್ಸ್ ತಂಡದ ವಿರುದ್ಧ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಗೆ ಮುಂದಾಯಿತು. ಟಾಸ್ ಸೋತ ಅಂಚಿಗೈಯ್ಸ್ ತಂಡ ನಿಗದಿತ 5 ಓವರ್‍ನಲ್ಲಿ 59 ರನ್ ಪೇರಿಸಿತು. ತಂಡದ ಪರ ದಿವ್ಯಕುಮಾರ್ 18, ಆದರ್ಶ್ ಅದ್ಕಲೇಗಾರ್ 24 ರನ್ ದಾಖಲಿಸಿದರು. ಗುರಿಬೆನ್ನತ್ತಿದ ರಾಯಲ್ ಫ್ರೆಂಡ್ಸ್ ಕರಿಕೆ 4 ಓವರ್‍ನಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿತು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.