ದೆಹಲಿ ದಕ್ಷಿಣ ಕ್ಷೇತ್ರದಿಂದ ಬಾಕ್ಸರ್ ವಿಜೇಂದರ್ ಸಿಂಗ್ ಸ್ಪರ್ಧೆ

ದೆಹಲಿ ದಕ್ಷಿಣ ಕ್ಷೇತ್ರದಿಂದ ಬಾಕ್ಸರ್ ವಿಜೇಂದರ್ ಸಿಂಗ್ ಸ್ಪರ್ಧೆ

HSA   ¦    Apr 23, 2019 04:27:55 PM (IST)
ದೆಹಲಿ ದಕ್ಷಿಣ ಕ್ಷೇತ್ರದಿಂದ ಬಾಕ್ಸರ್ ವಿಜೇಂದರ್ ಸಿಂಗ್ ಸ್ಪರ್ಧೆ

ನವದೆಹಲಿ: ಬಾಕ್ಸರ್ ವಿಜೇಂದರ್ ಸಿಂಗ್ ಅವರು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನಿಂದ ದಕ್ಷಿಣ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ವಿಜೇಂದರ್ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಕಾಂಗ್ರೆಸ್ ಪಕ್ಷವು ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿರುವುದು ತುಂಬಾ ಸಂತಸವಾಗಿದೆ. ನನಗೆ ಬಡತನದ ಬಗ್ಗೆ ತಿಳಿದಿದೆ ಮತ್ತು ಜನರ ಸಮಸ್ಯೆ ತಿಳಿಯಲು ನಾನು ಅವರ ಬಳಿಗೆ ತೆರಳುತ್ತೇನೆ ಎಂದರು.

ಬಾಕ್ಸಿಂಗ್ ನಲ್ಲಿ ನಾನು ದೇಶಕ್ಕೆ ಹೆಮ್ಮೆ ತಂದಿದ್ದೇನೆ. ಈಗ ಜನರ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಗೆ ನನ್ನ ಧನ್ಯವಾದಗಳು ಎಂದು ವಿಜೇಂದರ್ ಅವರು ಹೇಳಿದರು.

ಬಿಜೆಪಿ ಹಾಲಿ ಸಂಸದ ರಮೇಶ್ ಬಿಧೂರಿ ಅವರನ್ನು ವಿಜೇಂದರ್ ಎದುರಿಸಲಿರುವರು.