ಮೊದಲ ಕ್ರೀಡಾ ವಿವಿ ಕುಲಪತಿಯಾಗಿ ಕಪಿಲ್ ದೇವ್ ನೇಮಕ

ಮೊದಲ ಕ್ರೀಡಾ ವಿವಿ ಕುಲಪತಿಯಾಗಿ ಕಪಿಲ್ ದೇವ್ ನೇಮಕ

HSA   ¦    Sep 14, 2019 06:08:39 PM (IST)
ಮೊದಲ ಕ್ರೀಡಾ ವಿವಿ ಕುಲಪತಿಯಾಗಿ ಕಪಿಲ್ ದೇವ್ ನೇಮಕ

ನವದೆಹಲಿ: ಹರ್ಯಾಣದ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೊದಲ ಕುಲಪತಿಯಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಹರ್ಯಾಣ ಸರ್ಕಾರವು ನೇಮಕ ಮಾಡಿದೆ.

ಹರ್ಯಾಣದಲ್ಲಿ ಮೊದಲ ಸಲ ಸಚಿವ ಅನಿಲ್ ವಿಜ್ ಅವರು ಈ ಬಗ್ಗೆ ಶನಿವಾರ ಘೋಷಣೆ ಮಾಡಿದರು.

ಸೊನೆಪತ್ ನಲ್ಲಿ ಆರಂಭವಾಗಲಿರುವ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಕಪಿಲ್ ದೇವ್ ಅವರನ್ನು ಕುಲಪತಿ ಆಗಿ ನೇಮಿಸಲಾಗಿದೆ ಎಂದು ವಿಜ್ ಅವರು ಟ್ವೀಟ್ ಮಾಡಿದ್ದಾರೆ.

ಜುಲೈ 16ರಂದು ಹರ್ಯಾಣದ ಸಚಿವ ಸಂಪುಟವು ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಲು ಅನುಮತಿ ನೀಡಿತ್ತು.