ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸ್ಪೋಟ: 65 ಪ್ರಕರಣ ದೃಢ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸ್ಪೋಟ: 65 ಪ್ರಕರಣ ದೃಢ

SB   ¦    Jul 14, 2020 04:47:41 PM (IST)
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸ್ಪೋಟ: 65 ಪ್ರಕರಣ ದೃಢ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಸ್ಪೋಟಗೊಂಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಜನರಲ್ಲಿ ಮತ್ತಷ್ಟು ಹೆಚ್ಚಿದೆ. ಮಂಗಳವಾರ ಒಂದೇ ದಿನಕ್ಕೆ 65 ಪ್ರಕರಣಗಳು ದಾಖಲಾಗಿದ್ದು ಈವರೆಗಿನ ಅತೀ ಹೆಚ್ಚು ಪ್ರಕರಣ ಇದಾಗಿದೆ.

ಜಿಲ್ಲೆಯ ಭಟ್ಕಳದಲ್ಲಿ ಸೋಮವಾರ 26 ಪ್ರಕರಣ ದಾಖಲಾಗಿದ್ದು ಕುಮಟಾ 23, ಹೊನ್ನಾವರ 6, ಹಳಿಯಾಳ 5, ಮುಂಡಗೋಡ 2, ಕಾರವಾರ, ಅಂಕೋಲಾ, ಯಲ್ಲಾಪುರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 699, 261 ಗುಣಮುಖ ಜನ ಗುಣಮುಖರಾಗಿದ್ದಾರೆ. 433 ಸಕ್ರಿಯ ಪ್ರಕರಣಗಳಿದ್ದು ಹಾಗೂ ಐದು ಸೋಂಕಿತರು ಮೃಪಟ್ಟಿದ್ದಾರೆ.