ಹೈದರಾಬಾದ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೊಹಮ್ಮದ್ ಸಿರಾಜ್ ಯಶಸ್ಸಿನ ಶ್ರೇಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಲ್ಲಬೇಕು ಎಂದು ಸಿರಾಜ್ ಸೋದರ ಮೊಹಮ್ಮದ್ ಇಸ್ಮಾಯಿಲ್ ಹೇಳಿರುವರು.
ನಾಲ್ಕನೇ ಟೆಸ್ಟ್ ನಲ್ಲಿ ಸಿರಾಜ್ ಪ್ರಮುಖ ಬೌಲರ್ ಗಳ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಐದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಸಿರಾಜ್ ಸಾಧನೆಯಿಂದಾಗಿ ದೇಶ ಹಾಗೂ ಕುಟುಂಬ ಹೆಮ್ಮೆ ಪಡುತ್ತಿದೆ. ತಂದೆ ಅಗಲಿಕೆ ನೋವು ತಂದಿದೆ. ಇದನ್ನು ತಾಯಿ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿರಾಜ್ ಅವರೊಂದಿಗೆ ದಿನನಿತ್ಯ ಮಾತನಾಡಿ ತಾಯಿ ಅವರನ್ನು ಹುರಿದುಂಬಿಸಿದರು ಎಂದು ಇಸ್ಮಾಯಿಲ್ ತಿಳಿಸಿದರು.
ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸುವುದು ದೊಡ್ಡ ಸಾಧನೆ. ಸಿರಾಜ್ ಉತ್ತಮ ಪ್ರದರ್ಶನ ನೀಡಿರುವರು. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡದೆ ಇರುವಾಗಲೂ ಕೊಹ್ಲಿ ಮತ್ತು ಆರ್ ಸಿಬಿ ಅವರನ್ನು ಬೆಂಬಲಿಸಿದೆ. ಇದರ ಶ್ರೇಯಸ್ಸು ಆರ್ ಸಿಬಿ ಹಾಗೂ ಕೊಹ್ಲಿಗೆ ಕೂಡ ಸಲ್ಲುತ್ತದೆ ಎಂದು ಹೇಳಿದರು.