ಟೀಂ ಇಂಡಿಯಾ ವೇಗಿ ಶಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಟೀಂ ಇಂಡಿಯಾ ವೇಗಿ ಶಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

HSA   ¦    Mar 14, 2019 08:20:18 PM (IST)
ಟೀಂ ಇಂಡಿಯಾ ವೇಗಿ ಶಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಕೊಲ್ಕತ್ತಾ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಕೊಲ್ಕತ್ತಾ ಪೊಲೀಸರು ಅಲಿಪೊರೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮೇ ಕೊನೆಯ ವಾರದಲ್ಲಿ ಆರಂಭವಾಗಲಿರುವ ವಿಶ್ವಕಪ್ ಗೆ ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಯಿರುವಂತಹ ಶಮಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಶಮಿ ಮತ್ತು ಅವರ ಸೋದರನ ವಿರುದ್ಧ ಐಪಿಸಿ ಸೆಕ್ಷನ್ 498ಎ ಮತ್ತು 354ಎ ಪ್ರಕಾರ ಚಾರ್ಜ್ ಶೀಟ್ ನ್ನು ಕೊಲ್ಕತ್ತಾ ಪೊಲೀಸರು ಕೋರ್ಟ್ ಗೆ ಸಲ್ಲಿಸಿದರು.

ಶಮಿ ಪತ್ನಿ ಹಸಿನ್ ಜಹಾನ್ ಕಳೆದ ವರ್ಷ ಮಾರ್ಚ್ ನಲ್ಲಿ ಶಮಿ ಮತ್ತು ಅವರ ಕುಟುಂಬದ ವಿರುದ್ಧ ವರಕ್ಷಿಣೆ ಹಾಗೂ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿದ್ದರು. ಇದರನ್ನು ಪರಿಗಣಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಜೂನ್ 22ರಂದು ನಡೆಯಲಿದೆ.

ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಒಳಗೊಂಡಿದ್ದಾರೆ ಎಂದು ಹಸಿನ್ ಆರೋಪಿಸಿದ್ದರು. ಆದರೆ ಬಿಸಿಸಿಐ ನಡೆಸಿದ ತನಿಖೆಯಲ್ಲಿ ಶಮಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.