ವಿಶ್ವಕಪ್ ಗೆದ್ದಿರುವುದು ಜೀವನದ ಅತ್ಯಂತ ಗೌರವದ ಕ್ಷಣ: ಸಚಿನ್ ತೆಂಡೂಲ್ಕರ್

ವಿಶ್ವಕಪ್ ಗೆದ್ದಿರುವುದು ಜೀವನದ ಅತ್ಯಂತ ಗೌರವದ ಕ್ಷಣ: ಸಚಿನ್ ತೆಂಡೂಲ್ಕರ್

HSA   ¦    Feb 18, 2020 03:44:16 PM (IST)
ವಿಶ್ವಕಪ್ ಗೆದ್ದಿರುವುದು ಜೀವನದ ಅತ್ಯಂತ ಗೌರವದ ಕ್ಷಣ: ಸಚಿನ್ ತೆಂಡೂಲ್ಕರ್

ನವದೆಹಲಿ: ಬರ್ಲಿನ್ ನ ವೆರ್ಟಿ ಮ್ಯೂಸಿಕ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಲಾರೆಸ್ ಸ್ಪೋರ್ಟಿಂಗ್ ಮೂಮೆಂಟ್ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು, 2011ರಲ್ಲಿ ವಿಶ್ವಕಪ್ ಗೆದ್ದಿರುವುದು ತನ್ನ ಜೀವಮಾನದ ಅತೀ ಗೌರವದ ಕ್ಷಣ ಎಂದು ಬಣ್ಣಿಸಿದ್ದಾರೆ.

26 ವರ್ಷಗಳ ಕಾಯುವಿಕೆ ಬಳಿಕ ವಿಶ್ವಕಪ್ ಗೆದ್ದ ಬಳಿಕ ಸಹ ಆಟಗಾರರು ತನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಮೈದಾನಕ್ಕೆ ಸುತ್ತು ಬಂದ ಬಗ್ಗೆ ನೆನಪಿಸಿಕೊಂಡ ಅವರು, ``ಇದು ನನ್ನ ಜೀವನದ ಅತೀ ಹೆಮ್ಮೆಯ ಕ್ಷಣ’’ ಎಂದು ಹೇಳಿದ್ದಾರೆ.

ಇದು ನನ್ನ ಜೀವನದ ಅತ್ಯಂತ ಗೌರದ ಕ್ಷಣ, ಅಂತಿಮವಾಗಿ 22 ವರ್ಷಗಳಿಂದ ನಾನು ಬಯಸುತ್ತಿದ್ದ ಟ್ರೋಫಿಯನ್ನು ಹಿಡಿದಿದ್ದೇನೆ. ದೇಶದ ಪರವಾಗಿ ನಾನು ಈ ಟ್ರೋಫಿ ಹಿಡಿದುಕೊಂಡಿದ್ದೆ ಎಂದು ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ತಿಳಿಸಿದ್ದಾರೆ.

ಬೋರಿಸ್ ಬೇಕರ್ ಅವರು ಸಚಿನ್ ಗೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದರು ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರು ಈ ಟ್ರೋಪಿಯನ್ನು ಸಚಿನ್ ಅವರಿಗೆ ಅರ್ಪಿಸಿದರು.