ಐರ್ಲೆಂಡ್ ವಿರುದ್ದದ ಸರಣಿಗೆ ಮೊಯೀನ್ ಅಲಿ ಉಪನಾಯಕ

ಐರ್ಲೆಂಡ್ ವಿರುದ್ದದ ಸರಣಿಗೆ ಮೊಯೀನ್ ಅಲಿ ಉಪನಾಯಕ

HSA   ¦    Jul 22, 2020 12:47:14 PM (IST)
ಐರ್ಲೆಂಡ್ ವಿರುದ್ದದ ಸರಣಿಗೆ ಮೊಯೀನ್ ಅಲಿ ಉಪನಾಯಕ

ಲಂಡನ್: ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ಆಂಡ್ ವೆಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಮೊಯೀನ್ ಅಲಿ ಅವರನ್ನು ಉಪನಾಯಕನಾಗಿ ನೇಮಕ ಮಾಡಿದೆ.

ಐರ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ರಾಯಲ್ ಲಂಡನ್ ಸೀರಿಸ್ ಗೆ ಇಂಗ್ಲೆಂಡ್ ನಾಯಕನಾಗಿ ಇಯನ್ ಮೋರ್ಗನ್ ಅವರನ್ನು ನೇಮಿಸಲಾಗಿದೆ ಮತ್ತು ಮೊಯೀನ್ ಅಲಿ ಅವರು ಉಪನಾಯಕನಾಗಿರುವರು.

ಜುಲೈ 30ರಿಂದ ಸರಣಿಯು ಆರಂಭವಾಗಲಿದ್ದರೆ. ಇದು ಮುಚ್ಚಿದ ಕ್ರೀಡಾಂಗಣದಲ್ಲಿ ಜೈವಿಕ ಸುರಕ್ಷತೆಯ ಜತೆಗೆ ನಡೆಯಲಿದೆ ಎಂದು ಇಂಗ್ಲೆಂಡ್ ಬೋರ್ಡ್ ತಿಳಿಸಿದೆ.