ಕಾರು ಅಪಘಾತ: ರಾಷ್ಟ್ರಮಟ್ಟದ ನಾಲ್ವರು ಹಾಕಿ ಆಟಗಾರರು ದುರ್ಮರಣ

ಕಾರು ಅಪಘಾತ: ರಾಷ್ಟ್ರಮಟ್ಟದ ನಾಲ್ವರು ಹಾಕಿ ಆಟಗಾರರು ದುರ್ಮರಣ

YK   ¦    Oct 14, 2019 12:22:20 PM (IST)
ಕಾರು ಅಪಘಾತ: ರಾಷ್ಟ್ರಮಟ್ಟದ ನಾಲ್ವರು ಹಾಕಿ ಆಟಗಾರರು ದುರ್ಮರಣ

ಮಧ್ಯಪ್ರದೇಶ: ಅಪಘಾತದಲ್ಲಿ ನಾಲ್ಕು ಮಂದಿ ರಾಷ್ಟ್ರಮಟ್ಟದ ಹಾಕಿ ಆಟಗಾರರು ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರ  ಗಾಯಗೊಂಡಿದ್ದಾರೆ.

ಕಾರಿನಲ್ಲಿದವರೆಲ್ಲರೂ ಇಟಾರ್ಸಿಯಿಂದ ಹೊಶಂಗಬಾದ್ ಗೆ ಧ್ಯಾನ್ ಚಂದ್ರ ಟ್ರೋಪಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಈ ಅವಘಡ ರಾಷ್ಟ್ರೀಯ ಹೆದ್ದಾರಿ 69 ರೈಸಲ್ಪುರ್ ನಲ್ಲಿ ನಡೆದಿದೆ.