ವಿಶ್ವಕಪ್ ಗೆದ್ದು ಸೇನೆಗೆ ಅರ್ಪಿಸಲಿದ್ದೇವೆ: ವಿರಾಟ್ ಕೊಹ್ಲಿ

ವಿಶ್ವಕಪ್ ಗೆದ್ದು ಸೇನೆಗೆ ಅರ್ಪಿಸಲಿದ್ದೇವೆ: ವಿರಾಟ್ ಕೊಹ್ಲಿ

HSA   ¦    May 21, 2019 05:27:32 PM (IST)
ವಿಶ್ವಕಪ್ ಗೆದ್ದು ಸೇನೆಗೆ ಅರ್ಪಿಸಲಿದ್ದೇವೆ: ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾವು ವಿಶ್ವಕಪ್ ಗೆಲ್ಲಲಿದೆ ಎಂದು ಆತ್ಮವಿಶ್ವಾಸದಿಂದ ನುಡಿದ ನಾಯಕ ವಿರಾಟ್ ಕೊಹ್ಲಿ ಅವರು ಈ ಗೆಲುವನ್ನು ಭಾರತದ ಸೈನಿಕರಿಗೆ ಅರ್ಪಿಸುವುದಾಗಿ ಹೇಳಿದರು.

ಮೇ 230ರಿಂದ ಆರಂಭವಾಗಲಿರುವ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ತೆರಳುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸೇನೆಯ ಧೈರ್ಯಶಾಲಿ ಸೈನಿಕರನ್ನು ಶ್ಲಾಘಿಸಿದರು.

ನಾವು ಈ ವರ್ಷ ಸೈನಿಕರಿಗಾಗಿ ವಿಶ್ವಕಪ್ ಗೆಲ್ಲಲಿದ್ದೇವೆ. ನಾವು ಹಲವಾರು ಕಡೆಗಳಿಂದ ಪ್ರೇರಣೆ ಪಡೆಯಬಹುದು. ಆದರೆ ಸೈನಿಕರಿಗಿಂತ ದೊಡ್ಡ ಮಟ್ಟದ ಪ್ರೇರಣೆಯಿಲ್ಲ. ಸೇನೆಯಿಂದ ಪ್ರೇರಣೆಗೊಳಗಾಗುವುದಕ್ಕಿಂತ ದೊಡ್ಡ ವಿಚಾರ ಬೇರೊಂದಿಲ್ಲ. ಕೆಲ ಆಟಗಾರರು ತಮ್ಮ ಕುಟುಂಬದವರಿಂದ ಪ್ರೇರಣೆ ಪಡೆಯಬಹುದು. ಆದರೆ ಸೇನೆಗಾಗಿ ವಿಶ್ವಕಪ್ ಗೆಲ್ಲುವುದು ಹೆಚ್ಚಿನ ಪ್ರೇರಣೆ ನೀಡಲಿದೆ ಎಂದು ಟೀಂ ಇಂಡಿಯಾ ನಾಯಕ ತಿಳಿಸಿದರು.

ನಿರೀಕ್ಷೆಗಳನ್ನು ಈಡೇರಿಸಲು ತಂಡವು ಯಾವ ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಕೇಳಿದ ಪ್ರಶ್ನೆಗೆ, ಈ ಟೂರ್ನಮೆಂಟ್ ನಲ್ಲಿ ಯಶಸ್ಸು ಪಡೆಯಬೇಕಾದರೆ ಒತ್ತಡ ನಿಭಾಯಿಸುವುದು ಅತೀ ಮುಖ್ಯ ಎಂದರು.