ಕೊಹ್ಲಿ, ಮಂದನಾಗೆ ವರ್ಷದ ಸಿಯೆಟ್ ಪ್ರಶಸ್ತಿ

ಕೊಹ್ಲಿ, ಮಂದನಾಗೆ ವರ್ಷದ ಸಿಯೆಟ್ ಪ್ರಶಸ್ತಿ

HSA   ¦    May 14, 2019 03:52:07 PM (IST)
ಕೊಹ್ಲಿ, ಮಂದನಾಗೆ ವರ್ಷದ ಸಿಯೆಟ್ ಪ್ರಶಸ್ತಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ಅವರು 2019ನೇ ಸಾಲಿನ ಸಿಯೆಟ್ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾದರು.

ಕೊಹ್ಲಿ ಅವರು ಇದೇ ವೇಳೆ ಅತ್ಯುತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಪಾತ್ರರಾದರು.

9 ಪ್ರಶಸ್ತಿಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳು ಭಾರತೀಯರ ಪಾಲಾಗಿದೆ. ಟೆಸ್ಟ್ ಕ್ರಿಕೆಟರ್ ಪಶಸ್ತಿಯು ಚೇತೇಶ್ವರ್ ಪೂಜಾರ, ಅತ್ಯುತ್ತಮ ಏಕದಿನ ಉಪನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ ಆಗಿದ್ದಾರೆ.

ವರ್ಷದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಶಸ್ತಿಯು ಕುಲದೀಪ್ ಯಾದವ್ ಪಾಲಾಗಿದೆ. ವರ್ಷದ ಟಿ-20 ಆಟಗಾರನ ಪ್ರಶಸ್ತಿಯು ಅರೋನ್ ಫಿಂಚ್ ಪಾಲಾಗಿದೆ. ಅಫ್ಘಾನಿಸ್ತಾನದ ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ-20 ಬೌಲರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

1983ರ ವಿಶ್ವಕಪ್ ತಂಡದಲ್ಲಿ ಆಡಿದ್ದ ಮೊಹಿಂದರ್ ಅಮರನಾಥ್ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.