ಆಟಗಾರನ ಪಾತ್ರವು ಕಠಿಣವಾಗಿತ್ತು: ಸೌರವ್ ಗಂಗೂಲಿ

ಆಟಗಾರನ ಪಾತ್ರವು ಕಠಿಣವಾಗಿತ್ತು: ಸೌರವ್ ಗಂಗೂಲಿ

HSA   ¦    Jan 14, 2020 06:55:46 PM (IST)
ಆಟಗಾರನ ಪಾತ್ರವು ಕಠಿಣವಾಗಿತ್ತು: ಸೌರವ್ ಗಂಗೂಲಿ

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಟಗಾರನಾಗಿ ಇರುವುದು ತುಂಬಾ ಕಠಿಣ ಎಂದು ಹೇಳಿದ್ದಾರೆ.

ಸ್ಪೋರ್ಟ್ಸ್ ಸ್ಟಾರ್ ಏಸಸ್ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಆಡಳಿತಗಾರನಾಗಿ ತಪ್ಪು ಮಾಡಿದರೆ ಅದನ್ನು ತಿದ್ದಿಕೊಳ್ಳಲು ಅವಕಾಶವಿದೆ. ಆದರೆ ಆಟಗಾರನಾಗಿ ಇರುತ್ತಿದ್ದದ್ದು ಒಂದೇ ಅವಕಾಶ ಎಂದು ಗಂಗೂಲಿ ತಿಳಿಸಿದರು.

ಆಟದ ವೇಗವು ಹಿಂದಿಗಿಂತಲೂ ಅಧಿಕವಾಗಿದೆ ಎಂದು ಗಂಗೂಲಿ ಅವರು ಹೇಳಿದರು.