ಗಂಗೂಲಿ 22 ಸಲ ಕೋವಿಡ್-19 ಪರೀಕ್ಷೆ ಮಾಡಿಸಿದರೂ ಪಾಸಿಟಿವ್ ಬಂದಿಲ್ಲ!

ಗಂಗೂಲಿ 22 ಸಲ ಕೋವಿಡ್-19 ಪರೀಕ್ಷೆ ಮಾಡಿಸಿದರೂ ಪಾಸಿಟಿವ್ ಬಂದಿಲ್ಲ!

HSA   ¦    Nov 24, 2020 07:37:03 PM (IST)
ಗಂಗೂಲಿ 22 ಸಲ ಕೋವಿಡ್-19 ಪರೀಕ್ಷೆ ಮಾಡಿಸಿದರೂ ಪಾಸಿಟಿವ್ ಬಂದಿಲ್ಲ!

ಮುಂಬಯಿ: ಕಳೆದ ನಾಲ್ಕುವರೆ ತಿಂಗಳಲ್ಲಿ ಸುಮಾರು 22 ಬಾರಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.

ನಾನು ಕಳೆದ ನಾಲ್ಕು ತಿಂಗಳಲ್ಲಿ 22 ಸಲ ಕೋವಿಡ್-19 ಪರೀಕ್ಷೆಯನ್ನು ವೃತ್ತಿಪರ ಬದ್ಧತೆಯಿಂದಾಗಿ ಮಾಡಬೇಕಾಗಿ ಬಂದಿದೆ. ಆದರೆ ಯಾವತ್ತೂ ಪಾಸಿಟಿವ್ ಬಂದಿಲ್ಲ. ನನ್ನ ಸುತ್ತಲಿನ ಪ್ರದೇಶದಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು ಎಂದು ಗಂಗೂಲಿ ಮಂಗಳವಾರ ಮಾಹಿತಿ ಹೊರಹಾಕಿದರು.

ದುಬೈಗೆ ಪ್ರವಾಸ ಮಾಡಿ ಬಂದಿದ್ದೆ, ವಯಸ್ಸಾದ ತಂದೆತಾಯಿಯ ಜತೆಗೆ ವಾಸಿಸುತ್ತಿರುವ ಕಾರಣದಿಂದಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಬಂತು ಎಂದು ಗಂಗೂಲಿ ಹೇಳಿದರು.

ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ತಿಳಿಸಿದ ಅವರು, ಅಲ್ಲಿ ಸೋಂಕಿನ ಪ್ರಕರಣಗಳು ಕಡಿಮೆ ಆಗಿದೆ. ಆದರೆ ಅಲ್ಲಿಯ ಪ್ರಯಾಣ ನಿರ್ಬಂಧ ಸಡಿಲವಾಗಿಲ್ಲ. 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿರುವ ಆಟಗಾರರು ಅಂಗಣಕ್ಕೆ ಇಳಿಸಲು ಸಜ್ಜಾಗಿರುವರು ಎಂದರು.