ಧೋನಿ ತುಂಬಾ ಲೆಕ್ಕಾಚಾರದ ನಾಯಕ: ಆಶೀಶ್ ನೆಹ್ರಾ

ಧೋನಿ ತುಂಬಾ ಲೆಕ್ಕಾಚಾರದ ನಾಯಕ: ಆಶೀಶ್ ನೆಹ್ರಾ

HSA   ¦    May 07, 2020 04:03:52 PM (IST)
ಧೋನಿ ತುಂಬಾ ಲೆಕ್ಕಾಚಾರದ ನಾಯಕ: ಆಶೀಶ್ ನೆಹ್ರಾ

ನವದೆಹಲಿ: ಟೀಂ ಇಂಡಿಯಾದ ಮಾಜಿ ವೇಗಿ ಆಶೀಶ್ ನೆಹ್ರಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಶ್ಲಾಘಿಸಿದ್ದಾರೆ.

ಧೋನಿ ಅವರು ಮೈದಾನದಲ್ಲಿ ತುಂಬಾ ಲೆಕ್ಕಾಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಹಠಾತ್ ಆಗಿ ಯಾವುದೇ ನಿರ್ಧಾರ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಆಕಾಶವಾಣಿಗೆ ನೀಡಿರುವಂತಹ ಸಂದರ್ಶನದಲ್ಲಿ ಆಕಾಶ್ ಚೋಪ್ರಾ ಕೇಳಿದ ಪ್ರಶ್ನೆಗೆ ಅವರ ಉತ್ತರ ಇದಾಗಿತ್ತು.

ಸೌರವ್ ಗಂಗೂಲಿ ಮತ್ತು ಧೋನಿ ನಡುವಿನ ನಾಯಕತ್ವದ ವ್ಯತ್ಯಾಸಗಳನ್ನು ತಿಳಿಸಿ ಎಂದು ಚೋಪ್ರಾ ಕೇಳಿದರು. ಇಬ್ಬರು ನಾಯಕರಲ್ಲಿ ಕೂಡ ಆಟಗಾರರಿಂದ ಉತ್ತಮ ಪ್ರದರ್ಶನ ಹೊರಹಾಕುವಂತಹ ಗುಣವಿತ್ತು ಎಂದರು.

ಯುವಕರನ್ನು ಮುಂದೆ ತರಲು ಗಂಗೂಲಿ ಸವಾಲು ಎದುರಿಸಿದರು. ಧೋನಿ ಅವರು ಅನುಭವಿ ಹಾಗೂ ಯುವಕರ ಸಮತೋಲಿತ ತಂಡವನ್ನು ಮುನ್ನಡೆಸಿದರು. ಇಬ್ಬರಿಗೂ ಯುವ ಆಟಗಾರರಿಂದ ಉತ್ತಮ ಪ್ರದರ್ಶನ ಹೊರಗೆ ತರಲು ತಿಳಿದಿತ್ತು ಎಂದು ಇಬ್ಬರ ಗುಣಗಾನ ಮಾಡಿದರು.