ಲಾಸ್ ಏಂಜಲೀಸ್: ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಪ್ರಯಾಣಿಸುತ್ತಿದ್ದ ಎಸ್ ಯುವಿ ಕಾರು ಅಪಘಾತಕ್ಕೀಡಾಗಿ, ಟೈಗರ್ ವುಡ್ಸ್ ಗಂಭೀರವಾಗಿ ಗಾಯಗೊಂಡಿರುವರು ಎಂದು ಲಾಸ್ ಏಂಜಲೀಸ್ ಅಧಿಕಾರಿಗಳು ತಿಳಿಸಿದರು.
ಕಾರಿನ ಗಾಜನ್ನು ಒಡೆದು ವುಡ್ಸ್ ಅವರನ್ನು ಹೊರಗೆ ತೆಗೆಯಲಾಗಿದೆ. ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವರು.
ಮಂಗಳವಾರ ಬೆಳಗ್ಗೆ 7.15ರ ಹೊತ್ತಿಗೆ ಈ ಘಟನೆಯು ನಡೆದಿದ್ದು, ಕಾರಿನಲ್ಲಿ ವುಡ್ಸ್ ಮಾತ್ರ ಪ್ರಯಾಣಿಸುತ್ತಿದ್ದರು. ಅಗ್ನಿಶಾಮಕ ದಳದವರು ಕಾರಿನ ಮುಂದಿನ ಗಾಜನ್ನು ಒಡೆದು ವುಡ್ಸ್ ನ್ನು ಹೊರಗೆ ತೆಗೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.