ಟೀಂ ಇಂಡಿಯಾ ಕೋಚ್ ಹುದ್ದೆಗೆ ಮೊದಲ ಹಂತದ ಸಂದರ್ಶನ ಅಂತ್ಯ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಮೊದಲ ಹಂತದ ಸಂದರ್ಶನ ಅಂತ್ಯ

HSA   ¦    Aug 16, 2019 05:28:50 PM (IST)
ಟೀಂ ಇಂಡಿಯಾ ಕೋಚ್ ಹುದ್ದೆಗೆ ಮೊದಲ ಹಂತದ ಸಂದರ್ಶನ ಅಂತ್ಯ

ಮುಂಬಯಿ: ಮಾಜಿ ಆಟಗಾರ ಕಪಿಲ್ ದೇವ್ ಅವರ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಮೊದಲ ಸುತ್ತಿನ ಸಂದರ್ಶನ ಪೂರ್ತಿಗೊಳಿಸಿದೆ.

ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಫಿಲ್ ಸಿಮನ್ಸ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಹಿಂದೆ ಸರಿದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಂತಿಮಗೊಳಿಸಿದ ಆರು ಮಂದಿಯಲ್ಲಿ ಸಿಮನ್ಸ್ ಒಬ್ಬರಾಗಿದ್ದರು. ಹಾಲಿ ಕೋಚ್ ರವಿಶಾಸ್ತ್ರಿ, ಮಾಜಿ ಆಟಗಾರರಾದ ಲಾಲ್ ಚಂದ್ ರಾಜಪುತ್ ಮತ್ತು ರಾಬಿನ್ ಸಿಂಗ್, ನ್ಯೂಜಿಲೆಂಡ್ ನ ಮಾಜಿ ಕೋಚ್ ಮೈಕೆ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ ಉಳಿದ ಐದು ಮಂದಿ.

ಅಫ್ಘಾನಿಸ್ತಾನದ ಮಾಜಿ ಕೋಚ್ ಸಿಮನ್ಸ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನೀಡಿದ್ದರೂ ವೈಯಕ್ತಿಕ ಕಾರಣಗಳಿಂದಾಗಿ ಹಿಂದೆ ಸರಿದಿದ್ದಾರೆ.