ಮಾಯಾಂಕ್ ಭರ್ಜರಿ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಭಾರತ

ಮಾಯಾಂಕ್ ಭರ್ಜರಿ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಭಾರತ

HSA   ¦    Nov 15, 2019 05:15:57 PM (IST)
ಮಾಯಾಂಕ್ ಭರ್ಜರಿ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಭಾರತ

ಇಂಧೋರ್: ಮಾಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನದಾಟದಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 493 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಮಯಾಂಕ್ ಅಗರ್ವಾಲ್ ಅವರು ತನ್ನ ಎರಡನೇ ದ್ವಿಶತಕ ಬಾರಿಸಿದರು. ಅಗರ್ವಾಲ್ 330 ಎಸೆತಗಳಲ್ಲಿ 28 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 243 ರನ್ ಬಾರಿಸಿದರು.

ಎರಡನೇ ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ 60 ರನ್ ಮತ್ತು ಉಮೇಶ್ ಯಾದವ್ 25 ರನ್ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಚೇತೇಶ್ವರ ಪೂಜಾರ 54 ಮತ್ತು ಅಜಿಂಕ್ಯ ರಹಾನೆ 86 ರನ್ ಮಾಡಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು. 

ಭಾರತ 343 ರನ್ ಗಳ ಮುನ್ನಡೆಯನ್ನು ಪಡೆದುಕೊಂಡಿದೆ.