ಸಿಎಸ್ ಕೆ ಯಲ್ಲಿ ರೈನಾ ಸ್ಥಾನ ರಾಯುಡು ತುಂಬಬಹುದು: ಸ್ಟೈರಿಸ್

ಸಿಎಸ್ ಕೆ ಯಲ್ಲಿ ರೈನಾ ಸ್ಥಾನ ರಾಯುಡು ತುಂಬಬಹುದು: ಸ್ಟೈರಿಸ್

HSA   ¦    Sep 12, 2020 05:20:48 PM (IST)
ಸಿಎಸ್ ಕೆ ಯಲ್ಲಿ ರೈನಾ ಸ್ಥಾನ ರಾಯುಡು ತುಂಬಬಹುದು: ಸ್ಟೈರಿಸ್

ದುಬೈ: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ)ನಲ್ಲಿ ಎಡಗೈ ಬ್ಯಾಟ್ಸ್ ಮೆನ್ ಸುರೇಶ್ ರೈನಾ ಸ್ಥಾನ ತುಂಬಲು ಅಂಬಾಟಿ ರಾಯುಡು ಒಳ್ಳೆಯ ಆಯ್ಕೆ ಎಂದು ನ್ಯೂಜಿಲೆಂಡ್ ನ ಮಾಜಿ ಆಲ್ ರೌಂಡರ್ ಸ್ಕಾಟ್ ಸ್ಟೈರಿಸ್ ತಿಳಿಸಿದರು.

ರೈನಾ ತಂಡದಲ್ಲಿ ಇಲ್ಲದೆ ಇರುವುದು ತುಂಬಾ ಕಠಿಣ. ಅವರು ಅತ್ಯುತ್ತಮ ಆಟಗಾರ. ಅವರು ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದವರು. ಅವರು ಸ್ಥಾನ ತುಂಬುವುದು ಸ್ವಲ್ಪ ಕಷ್ಟ ಎಂದು ಸ್ಟಾರ್ ಸ್ಪೋರ್ಟ್ಸ್ ನ ಕ್ರಿಕೆಟ್ ಕನೆಕ್ಟೆಡ್ ನಲ್ಲಿ ಮಾತನಾಡುತ್ತಾ ಹೇಳಿದರು.

ಸಿಎಸ್ ಕೆ ಬಳಿ ತುಂಬಾ ಆಯ್ಕೆಗಳು ಇವೆ. ಅದರಲ್ಲೂ ಮೂರನೇ ಸ್ಥಾನವನ್ನು ರಾಯುಡು ತುಂಬಹುದು. ಆದರೆ ಸಿಎಸ್ ಕೆ ಮುಂದೆ ಕೆಲವು ಸವಾಲುಗಳು ಇವೆ. ಹರ್ಭಜನ್ ಸಿಂಗ್ ಕೂಡ ತಂಡದಲ್ಲಿ ಇಲ್ಲ ಎಂದರು.