ಲಂಡನ್ ಮ್ಯಾರಥಾನ್ ಆಯೋಜನೆ ಬಗ್ಗೆ ಮುಂದಿನ ತಿಂಗಳು ತೀರ್ಮಾನ

ಲಂಡನ್ ಮ್ಯಾರಥಾನ್ ಆಯೋಜನೆ ಬಗ್ಗೆ ಮುಂದಿನ ತಿಂಗಳು ತೀರ್ಮಾನ

HSA   ¦    Jul 28, 2020 02:28:27 PM (IST)
ಲಂಡನ್ ಮ್ಯಾರಥಾನ್ ಆಯೋಜನೆ ಬಗ್ಗೆ ಮುಂದಿನ ತಿಂಗಳು ತೀರ್ಮಾನ

ಲಂಡನ್: ಕೊರೋನಾ ಸೋಂಕಿನ ಭೀತಿಯಿಂದಾಗಿ ಲಂಡನ್ ಮ್ಯಾರಥಾನ್ ನಡೆಸುವ ಬಗ್ಗೆ ಆಗಸ್ಟ್ 7ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಏಪ್ರಿಲ್ 26ರಂದು ಲಂಡನ್ ಮ್ಯಾರಥಾನ್ ನಡೆಯಬೇಕಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಇದನ್ನು ಅಕ್ಟೋಬರ್ 4ರ ತನಕ ಮುಂದೂಡಲಾಗಿದೆ.

ಇದರ ಬಗ್ಗೆ ಎನ್ ಎಚ್ ಎಸ್ ಟ್ರಸ್ಟಿಗಳು, ತುರ್ತು ಸೇವೆಯವರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಬಳಿಕ ಮುಂದಿನ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಆಯೋಜನ ಸಮಿತಿಯ ನಿರ್ದೇಶಕ ಹಗ್ ಬ್ರಶರ್ ಸ್ಪರ್ಧಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿರುವರು.