ಮನೆಯಲ್ಲೇ ಕ್ರಿಕೆಟ್ ಆಡಿದ ಪಾಂಡ್ಯ ಸೋದರರು!

ಮನೆಯಲ್ಲೇ ಕ್ರಿಕೆಟ್ ಆಡಿದ ಪಾಂಡ್ಯ ಸೋದರರು!

HSA   ¦    Mar 30, 2020 04:37:54 PM (IST)
ಮನೆಯಲ್ಲೇ ಕ್ರಿಕೆಟ್ ಆಡಿದ ಪಾಂಡ್ಯ ಸೋದರರು!

ನವದೆಹಲಿ: ಶ್ರೀಮಂತನಿಂದ ಹಿಡಿದು ಕಡು ಬಡವನ ತನಕ ಪ್ರತಿಯೊಬ್ಬರಿಗೂ ಈಗ ಗೃಹಬಂಧನ. ಇದು ಕೊರೋನಾ ವೈರಸ್ ವಿಶ್ವದಾದ್ಯಂತ ಮಾಡಿರುವಂತಹ ಮಾಯೆ.

ಇದಕ್ಕೆ ಭಾರತೀಯ ಕ್ರಿಕೆಟಿಗರೂ ಹೊರತಾಗಿಲ್ಲ. ಆದರೆ ಟೀಂ ಇಂಡಿಯಾದ ಸೋದರ ಜೋಡಿ ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಮನೆಯಲ್ಲೇ ಕ್ರಿಕೆಟ್ ಆಡುವ ಮೂಲಕ ಸಮಯ ಕಳೆಯಲು ಪ್ರಯತ್ನಿಸಿದ್ದಾರೆ.

ಅವರು ತಮ್ಮ ಮನೆಯ ಒಳಗಡೆಯೇ ಕ್ರಿಕೆಟ್ ಆಡುತ್ತಿರುವ ವಿಡಿಯೋ ಮಾಡಿ ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಿದ್ದಾರೆ. ಒಳಾಂಗಣ ಕ್ರಿಕೆಟ್ ನಮಗೆ ತುಂಬಾ ಖುಷಿ ನೀಡುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.