ಕ್ರಿಕೆಟಿನಲ್ಲಿ ಸ್ವಜನಪಕ್ಷಪಾತವಿಲ್ಲ: ಆಕಾಶ್ ಚೋಪ್ರಾ

ಕ್ರಿಕೆಟಿನಲ್ಲಿ ಸ್ವಜನಪಕ್ಷಪಾತವಿಲ್ಲ: ಆಕಾಶ್ ಚೋಪ್ರಾ

HSA   ¦    Jun 27, 2020 06:41:51 PM (IST)
ಕ್ರಿಕೆಟಿನಲ್ಲಿ ಸ್ವಜನಪಕ್ಷಪಾತವಿಲ್ಲ: ಆಕಾಶ್ ಚೋಪ್ರಾ

ನವದೆಹಲಿ: ಕ್ರಿಕೆಟಿನ ಉನ್ನತ ಮಟ್ಟದಲ್ಲಿ ಸ್ವಜನಪಕ್ಷಪಾತವು ನಡೆಯುವುದಿಲ್ಲ, ಆದರೆ ದೇಶೀಯ ಮಟ್ಟದಲ್ಲಿ ನಡೆದಿರಬಹುದು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ರಾಜ್ಯ ತಂಡದಲ್ಲಿ ಆಟಗಾರನೊಬ್ಬ ಸುದೀರ್ಘ ಸಮಯದ ತನಕ ನಾಯಕನಾಗಿದ್ದದನ್ನು ನಾನು ನೋಡಿದ್ದೇನೆ. ಆತ ಆಡಳಿತಾಧಿಕಾರಿ ಮಗನಾಗಿದ್ದ. ಆತ ಕೇವಲ ಆಡಳಿತಾಧಿಕಾರಿ ಮಗನಾಗಿದ್ದ ಮತ್ತು ಆತನ ಪ್ರದರ್ಶನ ನೋಡಿದರೆ ಆಟಗಾರನಾಗಿರಲ್ಲ ಎಂದು ತಿಳಿದುಬರುವುದು. ಆದರೆ ಉನ್ನತ ಮಟ್ಟದಲ್ಲಿ ಇದು ನಡೆದಿಲ್ಲ. ಯಾರದೋ ಸ್ನೇಹಿತನ ಮಗನಿಗೆ ಐಪಿಎಲ್ ಒಪ್ಪಂದವನ್ನು ಕೊಟ್ಟಿಲ್ಲ ಎಂದು ಚೋಪ್ರಾ ತಿಳಿಸಿದ್ದಾರೆ.

ರೋಹನ್ ಗಾವಸ್ಕರ್ ಮತ್ತು ಅರ್ಜುನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ಅವರು ಇದೇ ವೇಳೆ ನೀಡಿದರು.

ಸುನಿಲ್ ಗಾವಸ್ಕರ್ ಪುತ್ರನಾಗಿದ್ದ ಕಾರಣಕ್ಕೆ ಅವರು ಅತೀ ಹೆಚ್ಚು ಟೆಸ್ಟ್, ಏಕದಿನ ಆಡಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ ಎಂದು ವಿವರಿಸಿದರು.