ವಿಲಿಯರ್ಸ್ ಸಿಕ್ಸ್ ನಿಂದ ಶಾರ್ಜಾದಲ್ಲಿ ಟ್ರಾಫಿಕ್ ಜಾಮ್!

ವಿಲಿಯರ್ಸ್ ಸಿಕ್ಸ್ ನಿಂದ ಶಾರ್ಜಾದಲ್ಲಿ ಟ್ರಾಫಿಕ್ ಜಾಮ್!

HSA   ¦    Oct 13, 2020 05:00:10 PM (IST)
ವಿಲಿಯರ್ಸ್ ಸಿಕ್ಸ್ ನಿಂದ ಶಾರ್ಜಾದಲ್ಲಿ ಟ್ರಾಫಿಕ್ ಜಾಮ್!

ಶಾರ್ಜಾ: ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಬಾರಿಸಿದ ಸಿಕ್ಸರ್ ನಿಂದಾಗಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ವಿಲಿಯರ್ಸ್ ಆರಂಭದಿಂದಲೇ ಕೊಲ್ಕತ್ತಾದ ಬೌಲರ್ ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ವಿಲಿಯರ್ಸ್ ಕೇವಲ 33 ಎಸೆತಗಳಲ್ಲಿ 73 ರನ್ ಬಾರಿಸಿದರು. ಈ ಇನ್ನಿಂಗ್ಸ್ ನಲ್ಲಿ ಆರು ಸಿಕ್ಸರ್ ಕೂಡ ಒಳಗೊಂಡಿತ್ತು. ಇದರಲ್ಲಿ ಎರಡು ಸಿಕ್ಸ್ ಮೈದಾನದಿಂದ ಹೊರಗಡೆ ಹೋಗಿತ್ತು ಮತ್ತು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಹೋಗಿ ಬಿದ್ದು ಕೆಲವು ನಿಮಿಷ ಟ್ರಾಫಿಕ್ ಗೆ ತೊಂದರೆ ಉಂಟಾಯಿತು.

ವಿಲಿಯರ್ಸ್ ಇನ್ನಿಂಗ್ಸ್ ನಿಂದ ರ್ ಆರ್ ಸಿಬಿ 82 ರನ್ ಗಳಿಂದ ಕೆಕೆಆರ್ ನ್ನು ಪರಾಭವಗೊಳಿಸಿತು.