ಸರ್ಣ ಪದಕವನ್ನು ಕೊರೋನಾ ವಾರಿಯರ್ಸ್ ಗೆ ಅರ್ಪಿಸಿದ ಹಿಮಾ ದಾಸ್

ಸರ್ಣ ಪದಕವನ್ನು ಕೊರೋನಾ ವಾರಿಯರ್ಸ್ ಗೆ ಅರ್ಪಿಸಿದ ಹಿಮಾ ದಾಸ್

HSA   ¦    Jul 25, 2020 04:44:21 PM (IST)
ಸರ್ಣ ಪದಕವನ್ನು ಕೊರೋನಾ ವಾರಿಯರ್ಸ್ ಗೆ ಅರ್ಪಿಸಿದ ಹಿಮಾ ದಾಸ್

ನವದೆಹಲಿ: ತಮ್ಮ ಜೀವನ ಹಂಗು ತೊರೆದು ಕೆಲಸ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಅಥ್ಲೀಟ್ ಹಿಮಾ ದಾಸ್ ಅವರು 2018ರ ಏಶ್ಯನ್ ಗೇಮ್ಸ್ ನ ಮಿಶ್ರ ರಿಲೇಯಲ್ಲಿ ಗೆದ್ದ ಚಿನ್ನದ ಪದಕವನ್ನು ಅರ್ಪಿಸಿದ್ದಾರೆ.

2018ರ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 4x400 ಮಿಶ್ರ ರಿಲೇ ತಂಡವಾದ ಮೊಹಮ್ಮದ್ ಅನಾಸ್, ಎಂ.ಆರ್. ಪೂವಮ್ಮ, ಹಿಮಾ ಮತ್ತು ಅರೊಕಿಯಾ ರಾಜೀವ್ ತಂಡವನ್ನು ಸ್ವರ್ಣಕ್ಕೆ ಭಡ್ತಿ ನೀಡಲಾಗಿದೆ.

ಈ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದುಕೊಂಡಿದ್ದ ಬಹ್ರೈನ್ ತಂಡದಲ್ಲಿದ್ದ ಕೆಮಿ ಅಡೆಕೊಯಾ ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ತಂಡವನ್ನು ಅನರ್ಹಗೊಳಿಸಲಾಗಿದೆ. ಇದರಿಂದ ಭಾರತ ತಂಡವು ಸ್ವರ್ಣಕ್ಕೆ ಭಡ್ತಿ ಪಡೆದಿದೆ.