`ಹಬಿಬಿ ಮೋಡ್’ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು!

`ಹಬಿಬಿ ಮೋಡ್’ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು!

HSA   ¦    Aug 04, 2020 10:00:09 AM (IST)
`ಹಬಿಬಿ ಮೋಡ್’ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು!

ಚೆನ್ನೈ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆಯೋಜನೆಯಿಂದ ಪ್ರೇಕ್ಷಕರು ಈಗಾಗಲೇ ಸಂಭ್ರಮಗೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ಅವತಾರದಲ್ಲಿರುವ ಫೋಟೊ ಪೋಸ್ಟ್ ಮಾಡಿದೆ.

ಮಾರ್ಚ್ 29ರಂದು ಆರಂಭವಾಗಬೇಕಾಗಿದ್ದ ಐಪಿಎಲ್ ನ್ನು ಕೋವಿಡ್-19ನಿಂದಾಗಿ ಮುಂದೂಡಲಾಗಿತ್ತು. ಈಗ ಯುಎಇಯಲ್ಲಿ ಸಪ್ಟೆಂಬರ್ 19ರಂದು ಐಪಿಎಲ್ ನಡೆಯಲಿದೆ ಎಂದು ಐಪಿಎಲ್ ನ ಆಡಳಿತ ಮಂಡಳಿಯು ತಿಳಿಸಿದೆ.

ಐಪಿಎಲ್ ಘೋಷಣೆಯಾದ ಬಳಿಕ ತಂಡಗಳು ವಿವಿಧ ರೀತಿಯ ವಿಡಿಯೋ ಹಾಗೂ ಫೋಟೊಗಳನ್ನು ಸಾಮಾಜಿಕ ತಾಲತಾಣದಲ್ಲಿ ಹಾಕುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ `ಹಬಿಬಿ ಮೋಡ್’ ಎಂದು ಹೇಳಿ ಫೋಟೊ ಪೋಸ್ಟ್ ಮಾಡಿದೆ.