ಅಫ್ಘಾನ್ ಆಟಗಾರ ಶಾಹಜಾದ್ ಗೆ ಒಂದು ವರ್ಷ ನಿಷೇಧ

ಅಫ್ಘಾನ್ ಆಟಗಾರ ಶಾಹಜಾದ್ ಗೆ ಒಂದು ವರ್ಷ ನಿಷೇಧ

HSA   ¦    Aug 19, 2019 03:25:56 PM (IST)
ಅಫ್ಘಾನ್ ಆಟಗಾರ ಶಾಹಜಾದ್ ಗೆ ಒಂದು ವರ್ಷ ನಿಷೇಧ

ದುಬೈ: ಆಟಗಾರರ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಮೊಹಮ್ಮದ್ ಶಾಹಜಾದ್ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಟ್(ಎಸಿಬಿ) ಒಂದು ವರ್ಷ ಕಾಲ ಕ್ರಿಕೆಟಿನಿಂದ ನಿಷೇಧಿಸಿದೆ.

ದೇಶದಿಂದ ಹೊರಗೆ ಹೋಗಲು ಬೋರ್ಡ್ ನ ಅನುಮತಿ ಪಡೆಯದೆ ಪ್ರಯಾಣಿಸಿದ ಶಾಹಜಾದ್ ಗೆ ನಿಷೇಧ ಹೇರಲಾಗಿದೆ ಎಂದು ಬೋರ್ಡ್ ಹೇಳಿದೆ.

ಬೋರ್ಡ್ ನ ಅನುಮತಿ ಪಡೆಯದೆ ಹಲವಾರು ಬಾರಿ ವಿದೇಶಕ್ಕೆ ಪ್ರಯಾಣಿಸಿದ್ದ ಶಾಹಜಾದ್ ಇದಕ್ಕೆ ಮೊದಲು ಕೂಡ ಹಲವಾರು ಸಲ ನಿಯಮ ಉಲ್ಲಂಘನೆ ಮಾಡಿದ್ದರು ಎಂದು ಬೋರ್ಡ್ ತಿಳಿಸಿದೆ.