ಇಂದು ಚೆನ್ನೈ ಸೂಪರ್ ಕಿಂಗ್ಸ್, ದೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ

ಇಂದು ಚೆನ್ನೈ ಸೂಪರ್ ಕಿಂಗ್ಸ್, ದೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ

Jayashree Aryapu   ¦    Apr 10, 2021 06:32:16 PM (IST)
ಇಂದು ಚೆನ್ನೈ ಸೂಪರ್ ಕಿಂಗ್ಸ್, ದೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ

ಐಪಿಎಲ್ 2021 ಆವೃತ್ತಿಯ ಎರಡನೇ ಪಂದ್ಯಾಟ ಇಂದು ಯುವ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡ ಡೆಲ್ಲಿ ತಂಡ ಅನುಭವಿ ಹಾಗೂ ಹಿರಿಯ ಆಟಗಾರರನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಮ್ ಮುಂಬೈನಲ್ಲಿ ನಡೆಯಲಿದೆ.

ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿ ತಂಡ ಕಣಕ್ಕಿಳಿಯಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೀಸನ್​ಗೆ ಶುಭಾರಂಭ ಮಾಡುವ ನಿರೀಕ್ಷೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಟ್ಟುಕೊಂಡಿದೆ.

ಮತ್ತೊಂದೆಡೆ ಮೂರು ಬಾರಿ ಚಾಂಪಿಯನ್​ಶಿಪ್ ಪಟ್ಟ ಗಳಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಿಂದಿನ ಸೋಲನ್ನು ಮರೆತು ಮತ್ತೆ ಹೊಸ ಮೈಲುಗಲ್ಲು ಸಾಧಿಸುವ ಚಲದಲ್ಲಿ ಇಂದಿನ ಪಂದ್ಯ ಎದುರಿಸಲಿದೆ.

ಕೀಪರ್ ಹಾಗೂ ಬ್ಯಾಟ್ಸ್​ಮನ್ ಆಗಿರುವ ರಿಷಭ್ ಪಂತ್ ಗಾಯಗೊಂಡು ಇಂದಿನ ಪಂದ್ಯಕ್ಕೆ ಅಲಭ್ಯರಾಗಿರುವ ಶ್ರೇಯಸ್ ಅಯ್ಯರ್ ಬದಲಿಯಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅನುಭವ ಚೆನ್ನೈಗೆ ಸಿಗಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚಿಮ್ಮುವ ಉತ್ಸಾಹದಲ್ಲಿರುವ ಯುವ ಆಟಗಾರರು ವರವಾಗಿದ್ದಾರೆ. ಐಪಿಎಲ್ ಟೂರ್ನಿ ಆಡಲು ಬೇಕಾದ ಚಾಕಚಕ್ಯತೆ ಈ ತಂಡಕ್ಕಿದೆ. ಮತ್ತೊಂದೆಡೆ, ಸಿಎಸ್​ಕೆ ಹಿರಿಯ ಹಾಗೂ ಉತ್ತಮ ಹೊಂದಾಣಿಕೆ ಇರುವ ಅನುಭವಿ ಆಟಗಾರರ ಪಡೆ ಹೊಂದಿದೆ. ಇಂದಿನ ಪಂದ್ಯ ರೋಚಕವಾಗಿ ನಡೆಯಲಿದೆ.