ಖುಷಿ ವಿಚಾರ ಹಂಚಿಕೊಂಡ ಖ್ಯಾತ ಕುಸ್ತಿಪಟು ಬಬಿತಾ ಫೊಗಟ್

ಖುಷಿ ವಿಚಾರ ಹಂಚಿಕೊಂಡ ಖ್ಯಾತ ಕುಸ್ತಿಪಟು ಬಬಿತಾ ಫೊಗಟ್

Y.K.   ¦    Nov 22, 2020 11:05:27 AM (IST)
ಖುಷಿ ವಿಚಾರ ಹಂಚಿಕೊಂಡ ಖ್ಯಾತ ಕುಸ್ತಿಪಟು ಬಬಿತಾ ಫೊಗಟ್

ನವದೆಹಲಿ: ಖ್ಯಾತ ಕುಸ್ತಿಪಟು ಬಬಿತಾ ಫೊಗಟ್ ತಾಯಿಯಾಗುತ್ತಿದ್ದಾರೆ. ಈ ವಿಷಯವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಪತಿಯ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಬಬಿತಾ ಫೊಗಟ್, ತಾಯಿಯಾಗುತ್ತಿರುವ ಕ್ಷಣದ ಹೊಸ ಉತ್ಸಾಹ ಮತ್ತು ಜೀವನದಲ್ಲಿ ಹೊಸ ಅಧ್ಯಾಯವನ್ನು ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಖ್ಯಾತ ಕುಸ್ತಿಪಟು ಮಹಾವೀರ್ ಫೊಗಟ್ ಅವರ ಪುತ್ರಿ ಬಬಿತಾ ಫೊಗಟ್. ಅವರ ಜೀವನಾಧಾರಿತ ಸಿನೆಮಾ ದಂಗಲ್ ಬಂದ ನಂತರ ಗೀತಾ ಮತ್ತು ಬಬಿತಾ ಫೊಗಟ್ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಎಲ್ಲಾ ಸಂಕಷ್ಟಗಳನ್ನು ದಾಟಿ ಅವರ ತಂದೆ ಇಬ್ಬರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ಮಾಡಿದ್ದರು.