ಡ್ವೆಯ್ನ್ ಬ್ರಾವೋ ಐಪಿಎಲ್ ನಿಂದ ಹೊರಗೆ: ಚೆನ್ನೈಗೆ ಮತ್ತಷ್ಟು ಸಂಕಷ್ಟ

ಡ್ವೆಯ್ನ್ ಬ್ರಾವೋ ಐಪಿಎಲ್ ನಿಂದ ಹೊರಗೆ: ಚೆನ್ನೈಗೆ ಮತ್ತಷ್ಟು ಸಂಕಷ್ಟ

HSA   ¦    Oct 21, 2020 05:36:25 PM (IST)
ಡ್ವೆಯ್ನ್ ಬ್ರಾವೋ ಐಪಿಎಲ್ ನಿಂದ ಹೊರಗೆ: ಚೆನ್ನೈಗೆ ಮತ್ತಷ್ಟು ಸಂಕಷ್ಟ

ದುಬೈ: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೆಯ್ನ್ ಬ್ರಾವೋ ಅವರು ಗಾಯಾಳು ಸಮಸ್ಯೆಯಿಂದ ಮುಂದಿನ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿರುವರು.

ತೊಡೆಸಂಧು ನೋವಿನಿಂದ ಬಳಲುತ್ತಿರುವ 37ರ ಹರೆಯದ ವಿಂಡೀಸ್ ಆಟಗಾರನ ಅನುಪಸ್ಥಿತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇನ್ನಷ್ಟು ದುರ್ಬಲವಾಗಲಿದೆ.

ಈಗಾಗಲೇ ಚೆನ್ನೈ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿದೆ. ಈಗಾಗಲೇ ಪ್ರಮುಖ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಐಪಿಎಲ್ ನಿಂದ ಹೊರಗುಳಿದಿದ್ದಾರೆ.