ದೆಹಲಿ ಹಿಂಸಾಚಾರ ಒಳ್ಳೆಯ ಚಿತ್ರಣವಲ್ಲವೆಂದ ರೋಹಿತ್ ಶರ್ಮಾ

ದೆಹಲಿ ಹಿಂಸಾಚಾರ ಒಳ್ಳೆಯ ಚಿತ್ರಣವಲ್ಲವೆಂದ ರೋಹಿತ್ ಶರ್ಮಾ

HSA   ¦    Feb 27, 2020 08:49:48 PM (IST)
ದೆಹಲಿ ಹಿಂಸಾಚಾರ ಒಳ್ಳೆಯ ಚಿತ್ರಣವಲ್ಲವೆಂದ ರೋಹಿತ್ ಶರ್ಮಾ

ನವದೆಹಲಿ: ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರು ದೆಹಲಿ ಹಿಂಸಾಚಾರದ ವೇಳೆ ಶಾಂತಿಗೆ ಮನವಿ ಮಾಡಿಕೊಂಡ ಬಳಿಕ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಇದರ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.

ಇದು ದೆಹಲಿಯ ಶ್ರೇಷ್ಠ ಚಿತ್ರಣವಲ್ಲ. ಆದಷ್ಟು ಬೇಗನೆ ಎಲ್ಲವೂ ತಟಸ್ಥವಾಗಲಿ ಎಂದು ರೋಹಿತ್ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಸಿಎಎ ಪರ ಹಾಗೂ ವಿರೋಧ ಹಿಂಸಾಚಾರದಿಂದಾಗಿ ಸುಮಾರು 34 ಮಂದಿ ಪ್ರಾಣ ಕಳೆದುಕೊಂಡು 200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೆಹಲಿಯಲ್ಲಿ ಈಗಲೂ ಭದ್ರತಾ ಪಡೆಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದೆ.