ನಾಲ್ಕು ವರ್ಷ ಕಾಲ ರಷ್ಯಾಗೆ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧ

ನಾಲ್ಕು ವರ್ಷ ಕಾಲ ರಷ್ಯಾಗೆ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧ

HSA   ¦    Dec 09, 2019 05:22:26 PM (IST)
ನಾಲ್ಕು ವರ್ಷ ಕಾಲ ರಷ್ಯಾಗೆ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧ

ನವದೆಹಲಿ: 2020ರ ಒಲಿಂಪಿಕ್ ಸಹಿತ ನಾಲ್ಕು ವರ್ಷಗಳ ಕಾಲ ರಷ್ಯಾಗೆ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧ ಹೇರಲಾಗಿದೆ ಎಂದು ವಿಶ್ವ ಉದ್ದೀಪನಾ ಮದ್ದು ಸೇವನೆ ತಡೆ ಏಜೆನ್ಸಿ(ವಾಡಾ) ಘೋಷಿಸಿದೆ.

ರಷ್ಯಾವು ಕೆಲವೊಂದು ಪ್ರಯೋಗಾಲಯದ ವರದಿಗಳಲ್ಲಿ ತಿದ್ದುಪಡಿ ಮಾಡಿದೆ ಮತ್ತು ಅಥ್ಲೆಟಿಕ್ ಗಳ ಪರೀಕ್ಷೆಯ ಫಲಿತಾಂಶದಲ್ಲಿ ಆಗಿರುವ ಅಸ್ಥಿರತೆಯ ಬಗ್ಗೆ ರಷ್ಯಾದ ಉದ್ದೀಪನಾ ದ್ರವ್ಯ ನಿಷೇಧ ಘಟಕವು ದೂರು ನೀಡಲು ವಿಫಲವಾಗಿದೆ ಎಂದು 2019ರ ಆರಂಭದಲ್ಲಿ ವಾಡಾದ ಸಮಿತಿಯು ಹೇಳಿತ್ತು.

ವಾಡಾದ ಕೆಲವು ಕಾರ್ಯಕ್ರಮಗಳನ್ನು ಇದು ದುರ್ಬಲಕೆ ಮಾಡಿಕೊಂಡಿದೆ ಮತ್ತು ಇದರಿಂದ ವಾಡಾ ಅವಿರೋಧವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.