ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆದ ಕ್ರಿಸ್ ಮೊರಿಸ್

ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆದ ಕ್ರಿಸ್ ಮೊರಿಸ್

MS   ¦    Feb 18, 2021 05:34:34 PM (IST)
ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆದ ಕ್ರಿಸ್ ಮೊರಿಸ್

ಚೆನ್ನೈ: ಕಳೆದ ಐಪಿಎಲ್ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ದಕ್ಷಿಣ ಆಫ್ರಿಕಾದ ತಂಡ ಆಟಗಾರ ಆಲ್ ರೌಂಡರ್ ಕ್ರಿಸ್ ಮೊರಿಸ್ ಇಂದು ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹಿರಿಮೆ ಇವರ ಪಾಲಾಗಿದೆ.

ಇಂದು ನಡೆದ ಐಪಿಎಲ್ ತಂಡದ ಆಟಗಾರರ ಆಯ್ಕೆಯ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಮೊರಿಸ್ ಖರೀದಿಗೆ ಮುಂಬೈ ಇಂಡಿಯನ್ಸ್, ಆರ್ ಸಿಬಿ, ಚೆನ್ನೈ, ಪಂಜಾಬ್ ತಂಡಗಳು ಆರಂಭದಲ್ಲಿ ಭಾರಿ ಪೈಪೋಟಿ ನಡೆಸಿದರು. ಆದರೆ ಕೊನೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮೊರಿಸ್ ರನ್ನು ದಾಖಲೆಯ 16.25 ಕೋಟಿ ರೂ. ಬೆಲೆ ನೀಡಿ ದಾಖಲೆಯ ಮೊತ್ತಕ್ಕೆ ಇವರನ್ನು ಖರೀದಿಸಲು ಸಫಲವಾಗಿದೆ.

ಈ ಹಿಂದೆ 2015ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು. 2020ರಲ್ಲಿ ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ತಂಡ 15.5 ಕೋಟಿ ರೂ ನೀಡಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ಮೊರಿಸ್ ಅವರನ್ನು 16.25 ಕೋಟಿ ರೂ ಗೆ ಖರೀದಿಸಿ ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದಿದೆ.