ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆ ಐತಿಹಾಸಿಕ ಗೆಲುವು

ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆ ಐತಿಹಾಸಿಕ ಗೆಲುವು

HSA   ¦    Aug 05, 2020 11:30:39 AM (IST)
ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆ ಐತಿಹಾಸಿಕ ಗೆಲುವು

ಲಂಡನ್: ಏಜಸ್ ಬೌಲ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ 329 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿಕೊಂಡಿದೆ.

ಪೌಲ್ ಸ್ಟಿರ್ಲಿಂಗ್ 142 ಮತ್ತು ಆಂಡ್ರೂ ಬಲ್ಬಿರಿರ್ನೆ 113 ರನ್ ಬಾರಿಸಿ ತಂಡವು ಒಂದು ಎಸೆತ ಬಾಕಿ ಇರುವಂತೆ ಗೆಲುವು ದಾಖಲಿಸಲು ನೆರವಾದರು. ಇವರಿಬ್ಬರು ಎರಡನೇ ವಿಕೆಟಿಗೆ 214 ರನ್ ಗಳ ಜತೆಯಾಟ ನಡೆಸಿ ಐತಿಹಾಸಿ ಗೆಲುವಿಗೆ ನೆರವಾದರು.

ಇಂಗ್ಲೆಂಡ್ ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.

ಇಂಗ್ಲೆಂಡ್ ನಾಯಕ ಇಯನ್ ಮೊರ್ಗನ್ 106 ಮತ್ತು ಬ್ಯಾನ್ಟನ್ 58 ರನ್ ಮಾಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಮೊರ್ಗನ್ 84 ಎಸೆತಗಳಲ್ಲಿ 106 ರನ್ ಬಾರಿಸಿದರು.