ಕ್ರಿಕೆಟ್ ಆಯ್ಕೆ ಸಮಿತಿಯ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್ ನಿಂದ ಸಾವು

ಕ್ರಿಕೆಟ್ ಆಯ್ಕೆ ಸಮಿತಿಯ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್ ನಿಂದ ಸಾವು

Jayashree Aryapu   ¦    May 02, 2021 04:53:46 PM (IST)
ಕ್ರಿಕೆಟ್ ಆಯ್ಕೆ ಸಮಿತಿಯ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್ ನಿಂದ ಸಾವು

ನವದೆಹಲಿ: ಕ್ರಿಕೆಟ್‌ ಆಡಳಿತಗಾರ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಸದಸ್ಯ ಕಿಶನ್ ರುಂಗ್ಟಾ (88) ಅವರು ಕೋವಿಡ್‌ನಿಂದಾಗಿ ಜೈಪುರದ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ನಿಧನರಾದರು.

ಇವರು 1998ರಲ್ಲಿ ಅವರು ಕೇಂದ್ರ ವಲಯವನ್ನು ಪ್ರತಿನಿಧಿಸಿ ಆಯ್ಕೆಗಾರರ ಸಮಿತಿಗೆ ಸೇರ್ಪಡೆಗೊಂಡಿದ್ದರು. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 2717 ರನ್‌ ಗಳಿಸಿದ್ದಾರೆ.

ರಾಜಸ್ಥಾನ ಕ್ರಿಕೆಟ್‌ ತಂಡದ ನಾಯಕರೂ ಆಗಿದ್ದ ರುಂಗ್ಟಾ ಅವರಿಗೆ ಕಳೆದ ವಾರ ಸೋಂಕು ದೃಢಪಟ್ಟಿತ್ತು ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಖಚಿತಪಡಿಸಿವೆ