ಚಾಹಲ್ ನ್ನು ರೋಹಿತ್ ಡಿನ್ನರ್ ಗೆ ಕರೆದಿರುವುದು ಯಾಕೆ?

ಚಾಹಲ್ ನ್ನು ರೋಹಿತ್ ಡಿನ್ನರ್ ಗೆ ಕರೆದಿರುವುದು ಯಾಕೆ?

HSA   ¦    Dec 10, 2019 04:55:23 PM (IST)
ಚಾಹಲ್ ನ್ನು ರೋಹಿತ್ ಡಿನ್ನರ್ ಗೆ ಕರೆದಿರುವುದು ಯಾಕೆ?

ಮುಂಬಯಿ: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಡಿನ್ನರ್ ಟ್ರೀಟ್ ಕೊಡುವುದಾಗಿ ಭರವಸೆ ನೀಡಿರುವರು.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಇವರಿಬ್ಬರು ಆಡುತ್ತಿದ್ದಾರೆ. ಡಿನ್ನರ್ ಟ್ರೀಟ್ ನೀಡುತ್ತೇನೆ ಎಂದು ಹೇಳುವಂತಹ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟ್ವೀಟ್ ಮಾಡಿದೆ.

ನೀನು ಐಪಿಎಲ್ ನಲ್ಲಿ ಬೌಲಿಂಗ್ ಮಾಡಲು ಬಯಸದೆ ಇರುವ ಬ್ಯಾಟ್ಸ್ ಮೆನ್ ಯಾರು ಎಂದು ರೋಹಿತ್ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ನೀನು(ರೋಹಿತ್) ಎಂದು ಚಾಹಲ್ ಉತ್ತರಿಸುತ್ತಾರೆ. ಕ್ರೀಸಿನಲ್ಲಿ ನೆಲೆ ನಿಂತಿದ್ದರೆ ಆಗ ನಿಮಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣವಾಗಿರುವುದು ಎಂದು ಚಾಹಲ್ ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.

ನಾನು ಅವರನ್ನು ಡಿನ್ನರ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ರೋಹಿತ್ ಹೇಳಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.