ನಾಲ್ಕನೇ ಟೆಸ್ಟ್: ಸಂಕಷ್ಟದಲ್ಲಿ ಟೀಂ ಇಂಡಿಯಾ

ನಾಲ್ಕನೇ ಟೆಸ್ಟ್: ಸಂಕಷ್ಟದಲ್ಲಿ ಟೀಂ ಇಂಡಿಯಾ

HSA   ¦    Mar 05, 2021 11:50:47 AM (IST)
ನಾಲ್ಕನೇ ಟೆಸ್ಟ್: ಸಂಕಷ್ಟದಲ್ಲಿ ಟೀಂ ಇಂಡಿಯಾ

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 80 ರನ್ ಗಳಿಗೆ ನಾಲ್ಕು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂಗ್ಲೆಂಡ್ ನ್ನು ಮೊದಲ ಇನ್ನಿಂಗ್ಸ್ ನಲ್ಲಿ 205 ರನ್ ಗಳಿಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳಕೊಳ್ಳಲು ಆರಂಭಿಸಿದ್ದು, ನಾಲ್ಕು ವಿಕೆಟನ್ನು ಬೇಗನೆ ಕಳಕೊಂಡಿದೆ.

ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮೊದಲೇ ಬೆನ್ ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಇದರ ಬಳಿಕ ಬಂದ ಉಪನಾಯಕ ಅಜಿಂಕ್ಯ ರಹಾನೆ(27) ಕೂಡ ಜಿಮ್ಮಿ ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.