ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ರಿಷಬ್ ಪಂತ್

ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ರಿಷಬ್ ಪಂತ್

HSA   ¦    Dec 05, 2019 04:40:13 PM (IST)
ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ರಿಷಬ್ ಪಂತ್

ಹೈದರಾಬಾದ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಮುರಿಯುವ ಸನಿಹದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಧೋನಿ ಏಳು ಟಿ20 ಪಂದ್ಯಗಳಲ್ಲಿ ಒಟ್ಟು ಐದು ಬಲಿ ಪಡದಿದ್ದಾರೆ. ಪಂತ್ ಏಳು ಪಂದ್ಯಗಳಲ್ಲಿ ಮೂರು ಬಲಿ ಪಡೆದಿರುವರು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಂತ್ ಅವಕಾಶ ಪಡೆಯುವ ಕಾರಣ ಈ ದಾಖಲೆ ಮುರಿಯಲು ಸಾಧ್ಯವಾಗಲಿದೆ.

ವೆಸ್ಟ್ ಇಂಡೀಶ್ ನ ವಿಕೆಟ್ ಕೀಪರ್ ದಿನೇಶ್ ರಾಮದಿನ್ ಐದು ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆಂಡ್ರೆ ಫ್ಲೆಚರ್ ನಾಲ್ಕು ಬಲಿ ಪಡೆದು ಮೂರನೇ ಸ್ಥಾನ ಮತ್ತು ದಿನೇಶ್ ಕಾರ್ತಿಕ್ ಮೂರು ಬಲಿ ಪಡೆದು ನಾಲ್ಕನೇ ಸ್ಥಾನದಲ್ಲಿರುವರು.