ಗಾಯಾಳು ಅಮಿತ್ ಮಿಶ್ರಾ ಜಾಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ದುಬೆ

ಗಾಯಾಳು ಅಮಿತ್ ಮಿಶ್ರಾ ಜಾಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ದುಬೆ

HSA   ¦    Oct 19, 2020 06:25:15 PM (IST)
ಗಾಯಾಳು ಅಮಿತ್ ಮಿಶ್ರಾ ಜಾಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ದುಬೆ

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ನ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯಾಳುವಾಗಿದ್ದು, ಅವರ ಬದಲಿಗೆ ಕರ್ನಾಟಕ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ಆಡಲಿರುವರು ಎಂದು ತಂಡದ ಆಡಳಿತ ಮಂಡಳಿಯು ಟ್ವೀಟ್ ಮಾಡಿದೆ.

27ರ ಹರೆಯದ ಪ್ರವೀಣ್ ತಂಡ ಸೇರಿಕೊಂಡಿರುವರು ಮತ್ತು ಮುಂದಿನ ಎಲ್ಲಾ ಐಪಿಎಲ್ ಪಂದ್ಯಗಳಲ್ಲಿ ಅವರು ಆಡಲಿರುವರು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ.

ದೇಶೀಯ ಟಿ-20 ಕ್ರಿಕೆಟಿನಲ್ಲಿ ದುಬೆ 14 ಪಂದ್ಯಗಳನ್ನು ಆಡಿದ್ದು, 16 ವಿಕೆಟ್ ಕಬಳಿಸಿರುವರು. ಅ.3ರಂದು ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮಿಶ್ರಾ ಗಾಯಗೊಂಡಿದ್ದರು.