ಹುಲಿಕಲ್ ಘಾಟಿ: ಭಾರಿ ವಾಹನಗಳ ರಾತ್ರಿ ಸಂಚಾರ ನಿಷೇಧ

ಹುಲಿಕಲ್ ಘಾಟಿ: ಭಾರಿ ವಾಹನಗಳ ರಾತ್ರಿ ಸಂಚಾರ ನಿಷೇಧ

YK   ¦    Aug 08, 2020 12:18:04 PM (IST)
ಹುಲಿಕಲ್ ಘಾಟಿ: ಭಾರಿ ವಾಹನಗಳ ರಾತ್ರಿ ಸಂಚಾರ ನಿಷೇಧ

ಶಿವಮೊಗ್ಗ: ಭಾರಿ ಗಾಳಿ, ಮಳೆಯ ಪರಿಣಾಮ ಶಿವಮೊಗ್ಗ–ಕರಾವಳಿ ಸಂಪರ್ಕಿಸುವ ಹುಲಿಕಲ್ ಘಾಟಿ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಭೂ ಕುಸಿತ, ಮರಗಳು ಬೀಳುವ ಸಾಧ್ಯತೆ ಕಾರಣ ಪ್ರತಿ ದಿನ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಲಾರಿ, ಬಸ್‌ ಮತ್ತಿತರ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಲಘು ವಾಹನಗಳು, ಆಂಬುಲೆನ್ಸ್‌ಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.