ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲಿಗೇರಿ ಇತಿಹಾಸ ಬರೆದ ಪಂಗಲ್

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲಿಗೇರಿ ಇತಿಹಾಸ ಬರೆದ ಪಂಗಲ್

HSA   ¦    Sep 20, 2019 06:07:15 PM (IST)
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲಿಗೇರಿ ಇತಿಹಾಸ ಬರೆದ ಪಂಗಲ್

ನವದೆಹಲಿ: ರಷ್ಯಾದ ಎಕಟೆರಿನ್ಬರ್ಗ್ ನಡೆಯುತ್ತಿರುವ ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಫೈನಲಿಗೆ ಪ್ರವೇಶಿಸಿರುವ ಭಾರತದ ಅಮಿತ್ ಪಂಗಲ್ ಅವರು ಇತಿಹಾಸ ನಿರ್ಮಿಸಿದ್ದಾರೆ.

ರೋಚಕವಾಗಿ ಸಾಗಿದ ಸೆಮಿಫೈನಲ್ ಪಂದ್ಯದಲ್ಲಿ ಪಂಗಲ್ ಅವರು ಕಝಕಿಸ್ತಾಣದ ಸಕೆನ್ ಬಿಬೊಸ್ಸಿನೊವ್ ವಿರುದ್ಧ 3-2ರಿಂದ ಗೆಲುವು ದಾಖಲಿಸಿಕೊಂಡು 52 ಕೆಜಿ ಫ್ಲೈವೆಯ್ಟ್ ವಿಭಾಗದ ಫೈನಲಿಗೆ ಪ್ರವೇಶಿಸಿದರು.

ಈ ದಾಖಲೆ ಮಾಡಿದ ಭಾರತದ ಮೊದಲ ಬಾಕ್ಸರ್ ಎನ್ನುವ ಹೆಗ್ಗಳಿಕೆಯು ಪಂಗಲ್ ಅವರದ್ದಾಗಿದೆ. ಪಂಗಲ್ ಫೈನಲಿಗೇರಿರುವ ಕಾರಣದಿಂದಾಗಿ ಪ್ರತಿಷ್ಠಿತ ಟೂರ್ನಮೆಂಟ್ ನಲ್ಲಿ ಬೆಳ್ಳಿ ಪದಕ ಗೆಲುವುದು ಖಚಿತವಾಗಿದೆ.